ಲೋಕದರ್ಶನವರದಿ
ಶಿಗ್ಗಾವಿ : ಆರ್ಥಿಕಸಂಘಟನೆಗಳಿಗಿಂತಲೂ ಇಂದು ನೋವು ನಲಿವು ಪರಸ್ಪರ ಹಂಚಿಕೊಂಡು ಸರ್ವರ ಹಿತ ಕಾಯುವ ಸಂಘಟನೆಗಳ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ತಾಲೂಕಾ ನಿವೃತ್ತ ಸಂಘದ ಸಂಘಟನೆಯಲ್ಲಿ ಅದು ಎದ್ದು ಕಾಣುತ್ತಿದೆ ಎಂದು ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಬೆಂಗಳೂರ, ತಾಲೂಕಾ ಘಟಕ ಶಿಗ್ಗಾವಿ ವತಿಯಿಂದ ರಾಷ್ಟ್ರೀಯ ನಿವೃತ್ತ ನೌಕರರ ದಿನಾಚರಣೆ ಅಂಗವಾಗಿ 2018-19 ನೇ ಸಾಲಿನ ನಿವೃತ್ತ ನೌಕರರ, ಹಿರಿಯ ನಾಗರಿಕರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಭಾಗವಹಿಸಿ ಮಾತನಾಡಿದ ಅವರು ಸರ್ವರಿಗೂ ಹುಟ್ಟು- ಸಾವು ಸಾಮಾನ್ಯ ಆದರೆ ಅದರಲ್ಲಿ ನಾವು ಹುಟ್ಟಿದಾಗ ಮಾಡುವ ಕಾರ್ಯಗಳು ಸಾವಿನ ನಂತರ ಸ್ಮರಿಸುವಂತಾಗಬೇಕು ಅಂದಾಗ ಜೀವನ ಸಾರ್ಥಕ ಎಂದರು.
ನಿವೃತ್ತ ಹಿರಿಯ ಪ್ರಾಚಾರ್ಯ ಬ ಫ ಯಲಿಗಾರ ಮಾತನಾಡಿ, ಯಾವಾಗಲೂ ಸ್ವಾರ್ಥ ಗೆಲ್ಲಬರದು ಬದಲಾಗಿ ಮೌಲ್ಯ ಗೆಲ್ಲಬೇಕು, ಧಮರ್ಾತೀಥ, ಲಿಂಗಾತೀಥ ಹಾಗೂ ಜಾತ್ಯಾತೀಥ ಇಂತಹ ಸಭೆಗಳು ಬೇಕು, ಇಲ್ಲಿ ಎಲ್ಲ ಧರ್ಮದ ಜನರು ಸೇರಿ ಕಟ್ಟಿರುವ ಈ ನಿವೃತ್ತ ಸಂಘದಿಂದ ಹಿರಿಯರ ಮಾರ್ಗದರ್ಶನ ದಾರೆಯರೆಯಬೇಕು ಅಂದಾಗ ಉಳಿದ ವಿವಿಧ ಸಂಘಗಳಿಗೆ ಎಲ್ಲರಿಗೂ ಮಾರ್ಗದರ್ಶಕರಾಗಲು ಸಾಧ್ಯವಿದೆ ಎಂದ ಅವರು ಈಗಿನ ಸರಕಾರಿ ನೌಕರರಿಗೆ ನೀಡುತ್ತಿರುವ ಸಂಬಳಕ್ಕಿಂತ ನಿವೃತ್ತ ನೌಕರರ ಪಿಂಚಣಿಯು ಹೆಚ್ಚಿಗಿದೆ ಅಂತಹ ಮೌಲ್ಯಯುತ ಪಿಂಚಣಿ ಪಡೆದವರೇ ಧನ್ಯರು ಎಂದರು.
ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಫ್ ಆರ್ ನರಗುಂದ, ತಾಲೂಕಾ ನೌಕರರ ಸಂಘದ ಅದ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ 2018-19 ನೇ ಸಾಲಿನ ನಿವೃತ್ತ ನೌಕರರನ್ನ, ಹಿರಿಯ ನಾಗರಿಕರನ್ನ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳನ್ನ ಸನ್ಮಾನಿಸಲಾಯಿತು, ನಂತರ 2018-19 ನೇ ಸಾಲಿನ ವಾಷರ್ಿಕ ಸಾಮಾನ್ಯ ಸಭೆ ಜರುಗಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಘದ ಅದ್ಯಕ್ಷ ಸಿ ವಿ ಮತ್ತಿಗಟ್ಟಿ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ಸಿ ಎಸ್ ಕಮ್ಮಾರ, ವಿ ಸಿ ಮಾಸನಕಟ್ಟಿ, ಮೋಹನ ಹೊನ್ನತ್ತಿ, ಓ ಜಿ ಪಾಟೀಲ, ಸಂಘದ ಪಧಾಧಿಕಾರಿಗಳಾದ ಬಿ ಇ ಕೊಡ್ಲಿ, ವಿ ಎಸ್ ಶೇಗಡಿ, ಎ ಕೆ ಅದವಾನಿಮಠ, ಎ ಎಸ್ ಮುಲ್ಲಾ, ಜಿ ಎಂ ಮಠದ, ಎಸ್ ವಿ ಯಲಿಗಾರ, ಸಿ ಬಿ ಹುರಳಿಕೊಪ್ಪಿ, ಎಸ್ ವಿ ದೇಶಪಾಂಡೆ, ಎಂ ಎಚ್ ಚೋಟಪ್ಪನವರ, ವಿಕೆ ಪೂಜಾರ, ಸಿ ಎಫ್ ಗಂಡೂಡಿ, ಎನ್ ಎಂ ಬೊಮ್ಮನಕಟ್ಟಿ, ಎಸ್ ಪಿ ಮಹೇಂದ್ರಕರ, ಎಂ ಎಫ್ ಕಾಳಿ, ಎನ್ ಆರ್ ಸೋಮನಕಟ್ಟಿ, ಎಫ್ ಎಲ್ ದೊಡ್ಡಮನಿ, ಪಿ ಎಸ್ ಯಲಿಗಾರ, ಎಸ್ ಆರ್ ಕುಲಕಣರ್ಿ, ಟಿ ಜಿ ಅಣ್ಣಿಗೇರಿ, ಐ ಎಚ್ ಭೋವಾಜಿ, ವನಮಾಲಾ ಕುಲಕಣರ್ಿ, ಶಂಕ್ರವ್ವ ಬಿ ಧರೆಣ್ಣವರ, ರೇಣುಕಾ ಮಳಲಿ, ಲೀಲಾವತಿ ಎಚ್ ದೀಕ್ಷೀತ್ ಸೇರಿದಂತೆ ತಾಲೂಕಿನ ನಿವೃತ್ತ ಸರಕಾರಿ ನೌಕರರು ಹಾಗೂ ಪದಾಧಿಕಾರಿಗಳು ಇದ್ದರು.