ಸಿಗ್ನಲ್‌ನಲ್ಲಿ ನೆರಳು ಛಾವಣಿ: ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ
Shade roof at signal: Appreciation for the work of the officials
ಲೋಕದರ್ಶನ ವರದಿ
ಬೆಳಗಾವಿ 05: ನಗರದಲ್ಲಿ ಹಿಂದಿನ ಬಾರಿಗಿಂತಲೂ ಈ ಭಾರಿ ಬಿಸಿಲು ಪ್ರಮಾಣ ಹೆಚ್ಚಾಗಿರುವುದರಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಬಿಸಿಲು ಏರುತ್ತಿದ್ದಂತೆ ಹೊರಗಡೆ ಹೋಗುವುದೇ ದುಸ್ತರವಾಗಿದೆ. ವಯೋವೃದ್ಧರಿಗಂತೂ ಬಿಸಿಲು ಪ್ರಾಣಕ್ಕೇ ಸಂಚಕಾರ ತರುವ ಮಟ್ಟಿಗೆ ಹೋಗಿದೆ. ಇದನ್ನು ಮನಗಂಡ ಬೆಳಗಾವಿ ಜಿಲ್ಲಾಡಳಿತವು ಬೆಳಗಾವಿಯ ಪ್ರಮುಖ ವೃತ್ತಗಳ ಸಿಗ್ನಲ್‌ಗಳಲ್ಲಿ ನೆರಳು ಛಾವಣಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ. ಮೊದಲ ಹಂತವಾಗಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನೆರಳು ಛಾವಣಿ ಮಂಗಳವಾರ ಅಳವಡಿಸಲಾಗಿದೆ.
ಬಸಿಲಿನ ತಾಪ ದಿನ ದಿನಕ್ಕೆ ಹೆಚ್ಚಾಗುತ್ತಿರುವದರಿಂದ ನಗರದ ಪ್ರಮುಖ ವೃತ್ತಗಳ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ಸವಾರರು ನೆತ್ತಿಸುಡುವ ಬಿಸಿಲಲ್ಲೇ ನಿಲ್ಲಬೇಕಾಗುತ್ತಿದೆ. ಇಂಥ ಪರಿಸ್ಥಿತಿಯನ್ನು ಮನಗಂಡಿರುವ ಬೆಳಗಾವಿ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯು ನಗರದ ಆಯ್ದ ಕೆಲ ಸಿಗ್ನಲ್ ಸ್ಥಳಗಳಲ್ಲಿ ನೆರಳು ಛಾವಣಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಿಗ್ನಲ್‌ನಲ್ಲಿ ನೆರಳು ಛಾವಣಿ ಅಳವಡಿಸಲಾಯಿತು.
ಮಂಗಳವಾರ ಸಿಗ್ನಲ್ ಬೀಳುತ್ತಲೇ ಕೆಲ ಕ್ಷಣ ಹಾಯಾಗಿ ನೆತ್ತಿ ತಂಪಾಗಿಸಿಕೊಂಡ ವಾಹನ ಸವಾರರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಕೆ. ರಾಮಾನುಜನ್ ಹಾಗೂ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರ ಹಾಗೂ ಇನ್ನೂಳಿದ ಅಧಿಕಾರಿಗಳ ಈ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 