ಕ್ವಿಟ್ ಇಂಡಿಯಾ ದಿನದ ಸವಿನೆನಪಿಗಾಗಿ ವಿಚಾರಗೋಷ್ಠಿ
Seminar to Commemorate Quit India Day
ಲೋಕದರ್ಶನ ವರದಿ
ನೇಸರಗಿ 08: ಭಾರತ ದೇಶಕ್ಕೆ ಸ್ವಾತಂತ್ರ್ಯವು ಸುಮ್ಮನೆ ಬಂದಿಲ್ಲ. ಅನೇಕ ಮಹಾತ್ಮರು, ಹೋರಾಟಗಾರರ ಪ್ರಯತ್ನದ ಪರಿಣಾಮ ಬ್ರಿಟಷರು ಭಾರತವನ್ನು ಬಿಟ್ಟು ಹೋದರು ಎಂದು ವಾಗ್ಮಿ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಬೆಳಗಾವಿ, ಚಿಕ್ಕೋಡಿ ವಿಭಾಗ ಸಂಯೋಜಕ ರಾಮಚಂದ್ರ ಕಾಕಡೆ ಹೇಳಿದರು.
ಅವರು ಗ್ರಾಮದ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಶನಿವಾರ ಅಖಿಲ ಭಾರತ ಸಾಹಿತ್ಯ ಪರಿಷತ್ತ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಕ್ವಿಟ್ ಇಂಡಿಯಾ ದಿನದ ಸವಿನೆನಪಿಗಾಗಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ದೊರಕಲು ಹೋರಾಡಿದ ಮಹಾತ್ಮಾ ಗಾಂಧಿ, ಸುಭಾಸ ಚಂದ್ರ ಬೋಸ್, ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಇವರ ಆದರ್ಶಗಳು, ತ್ಯಾಗ, ಬಲಿದಾನವನ್ನು ಇಂದಿನ ಯುವ ಜನತೆ ನೆನಪಿನಲ್ಲಿಟ್ಟುಕೊಳ್ಳಬೇಕೆಂದರು. ಹಾಡುಗಾರ್ತಿ ಮಂಜುಳಾ ಮಾಸ್ತಮರ್ಡಿ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಅಧ್ಯಕ್ಷತೆಯನ್ನು ಫಾ. ಹೆರ್ಟಿ ವಿಕ್ಟರ್ ಡಿಕ್ರೂಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಬೆಳಗಾವಿ ಘಟಕ ಕಾರ್ಯದರ್ಶಿ ಸಿ.ವಾಯ್.ಮೆಣಸಿನಕಾಯಿ, ಪತ್ರಕರ್ತ ಪ್ರಕಾಶ ಕೆಳಗಿನಮನಿ, ಶಿಕ್ಷಕರಾದ ಎಸ್.ಎಸ್.ದಳವಾಯಿ, ಎಸ್.ಬಿ.ಬೆಟಗೇರಿ, ಕೆ.ಡಿ.ಬೋಗೂರ, ಬಿ.ಆರ್. ಪಾಟೀಲ, ಜೆ.ಎಂ.ಪಟ್ಟಣಶೆಟ್ಟಿ, ಎ.ಎಸ್.ಲೋಬೋ, ವಿಜಯಲಕ್ಷ್ಮೀ ಮಾಳನ್ನವರ, ಪ್ರಶಾಂತ ಹಂಜಿ, ಸುನೀಲ ಮಾಸ್ತಮರ್ಡಿ ಉಪಸ್ಥಿತರಿದ್ದರು. ನಾಗೇಶ ಅಮ್ಮಗೋಳ ನಿರೂಪಿಸಿ, ವಂದಿಸಿದರು.
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಕಾಣೆಯಾದ ನಾಟಕ, 6 ತಿಂಗಳ ಬಳಿಕ ಪ್ರಕರಣ ಬಯಲು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ 