ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಶಿಗ್ಗಾವಿ 18: ಪಟ್ಟಣದ ಅಂಬೇಡ್ಕರ್ ಸಭಾ ಭವನದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ವಿದ್ಯಾರ್ಥಿನಿಯರಾದ ಸ್ಪೂರ್ತಿ ಮಾಗಿ ಹಾಗೂ ಪೂಜಾ ವನಹಳ್ಳಿ ನೇತೃತ್ವದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರ ಹಾವೇರಿ ಮತ್ತು ರಕ್ತ ಶೇಖರಣಾ ಘಟಕ ಶಿಗ್ಗಾವಿ ನೇತೃತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಹಾವೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಡಾ.ಸಂತೋಷ, ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ರಾಜು ಕೆಂಬಾವಿ ಸೇರಿದಂತೆ ಶಿಗ್ಗಾವಿ ರಕ್ತ ಶೇಖರಣಾ ಘಟಕದ ಸೌಭಾಗ್ಯ ದೊಡ್ಡಮನಿ, ಪುಷ್ಪಾ, ಕಿರಣ ಹಾಗೂ ಕಾಲೇಜ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 25 ಜನ ವಿದ್ಯಾರ್ಥಿಗಳು ರಕ್ತದಾನವನ್ನು ಮಾಡಿದರು.