ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ

ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ Selection of office bearers for the Farmers' Association

ಲೋಕದರ್ಶನ ವರದಿ 

         ಹಾವೇರಿ 17:  ಹಾವೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳ  ಅಧ್ಯಕ್ಷತೆಯಲ್ಲಿ ಸೆ.16 ರಂದು ಜರುಗಿದ  ಹಾವೇರಿ ತಾಲೂಕಿನ ತಾಲೂಕಾ ಕೃಷಿಕ ಸಮಾಜದ ಸಭೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ರುದ್ರ​‍್ಪ ಶಿದ್ದಲಿಂಗಪ್ಪ ಕಾಳಪ್ಪನವರ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ವೀರ​‍್ಪ ವಿಭೂತಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿನಿಧಿಯಾಗಿ ಶಿವಪುತ್ರ​‍್ಪ ಎನ್ ಶಿವಣ್ಣನವರ,  ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಬಸವಂತಪ್ಪ ಹೆಡಿಯಾಲ, ಮತ್ತು ಖಜಾಂಚಿಯಾಗಿ ರೇವಣಸಿದ್ದಪ್ಪ ಭರಮಪ್ಪ ಸೊಪ್ಪಿನ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಸಭೆಯಲ್ಲಿ ನಾಗೆಂದ್ರ​‍್ಪ ಪರಮಣ್ಣ ಕೆಂಡೊಂಡ, ಗಣೇಶ ಹನುಮಂತಪ್ಪ ದೊಡ್ಡಮನಿ, ಹನುಮಣ್ಣ ಸಹದೇವಪ್ಪ ಕನ್ನನಾಯಕನವರ, ಅಶೋಕರೆಡ್ಡಿ ಹೆಚ್ ಮರಚರೆಡ್ಡಿ , ಬುದ್ದಿವಂತಪ್ಪ ಚನ್ನಬಸಪ್ಪ ಕಾಸಂಬಿ, ಬಸವರಾಜ ಡೊಂಕಣ್ಣನವರ, ಬಸನಗೌಡ ಯಲ್ಲನಗೌಡ ಹರ್ತಿ, ಪರಮೇಶ್ವರ ರಾಮಣ್ಣ ನರಗುಂದ, ಕರಬಸಪ್ಪ ಚನ್ನಬಸಪ್ಪ ಕಡ್ಲಿ, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲ್ ನಾಯ್ಕ್‌.ಹೆಚ್, ಧನಂಜಯ ನಾಗಣ್ಣನವರ, ತಾಂತ್ರಿಕ ವ್ಯವಸ್ಥಾಪಕರಾದ ವನರಾಜ ಬಣಕಾರ ಇತರರು ಉಪಸ್ಥಿತರಿದ್ದರು.