ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಗೆ ಆಯ್ಕೆ

ಬ್ಯಾಡಗಿ 27: ಈಜು ದೈಹಿಕ ಚಟುವಟಿಕೆಯ ಒಂದು ಉತ್ತಮ ರೂಪವಾಗಿದ್ದು ಅದು ದೇಹ ಮತ್ತು ಮನಸ್ಸಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು. 

ಮಂಗಳವಾರ ಅವರು ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ 23ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾಗಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ಅಂತರಾಜ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಕುಮ್ಮೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮಂತಪ್ಪ ನಡುವಿನಹಳ್ಳಿ ಅವರನ್ನು ಸನ್ಮಾನಿಸಿ ಮಾತನಾಡಿದರು.ಈಜು ವ್ಯಾಯಾಮದ ಕಡಿಮೆ-ಪ್ರಭಾವದ ರೂಪವಾಗಿದ್ದು ಅದು ಹೃದಯರಕ್ತನಾಳದ ಆರೋಗ್ಯ ಮತ್ತು ಸಹಿಷ್ಣುತೆಯನ್ನು ಸುಧಾರಿಸುತ್ತದೆ. ಈಜು ತೋಳುಗಳು, ಕಾಲುಗಳು, ಬೆನ್ನು ಮತ್ತು ಕೋರ್ ಸೇರಿದಂತೆ ಎಲ್ಲಾ ಪ್ರಮುಖ ಸ್ನಾಯು ಗುಂಪುಗಳನ್ನು ಕೆಲಸ ಮಾಡುತ್ತದೆ, ಇದು ಶಕ್ತಿಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.ನೀರಿನ ತೇಲುವಿಕೆಯು ಸ್ನಾಯುಗಳಲ್ಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ, ಈಜುವಿಕೆಯನ್ನು ವಿಶ್ರಾಂತಿ ಮತ್ತು ಆಹ್ಲಾದಿಸಬಹುದಾದ ವ್ಯಾಯಾಮದ ರೂಪವಾಗಿದೆ ಎಂದರಲ್ಲದೇ 23ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಹನುಮಂತಪ್ಪ ಅವರು ರಾಷ್ಟ್ರಮಟ್ಟದ ಕ್ರೀಡೆಯಲ್ಲಿಯೂ ಸಹ ಅಗ್ರ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತರಲೆಂದು ಹಾರೈಸಿದರು. 

ತಾಲೂಕಾ ಅಕ್ಷರ ದಾಸೋಹದಿಕಾರಿ ಎನ್‌.ತಿಮ್ಮಾರಡ್ಡಿ ಮಾತನಾಡಿ ನಿಯಮಿತವಾಗಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು  ಹಾಗೂ  ಅರಿವಿನ ಸಾಮರ್ಥ್ಯಗಳನ್ನು ಸುಧಾರಿಸಲಿದೆ. ಆರೋಗ್ಯಕರ ಜೀವನಶೈಲಿಯನ್ನು ಕ್ರೀಡೆಯು ಪ್ರತಿಯೊಬ್ಬರಲ್ಲೂ ತುಂಬಲಿದೆ. ಈಜಿನಂತಹ ಕ್ರೀಡೆಗಳು ವಿವೇಕಯುತವಾಗಿರಲು ಮತ್ತು ಜೀವನದ ಚಂಚಲತೆಯನ್ನು ನಿಭಾಯಿಸಲು  ಉತ್ತಮ ಸಹಾಯ ಮಾಡಲಿವೆ ಎಂದರು.ಈ ಸಂದರ್ಭದಲ್ಲಿ ತಾಲೂಕಾ ಅಕ್ರಮ ಸಕ್ರಮ ಸಮಿತಿಯ ನಿರ್ದೇಶಕ ಮಾರುತಿ ಅಚ್ಚಿಗೇರಿ, ಮ್ಯಾನೇಜರ್ ಪ್ರಕಾಶ ಹಿರೇಮಠ, ಪಿಡಿಓ ಜಗದೀಶ್ ಮಣ್ಣಮ್ಮನವರ ಸೇರಿದಂತೆ ಇತರರಿದ್ದರು.