ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -2: 981 ವಿದ್ಯಾರ್ಥಿಗಳು ಹಾಜರು, 232 ವಿದ್ಯಾರ್ಥಿಗಳು ಗೈರು ಹಾಜರು

ಧಾರವಾಡ 29: ಇಂದು (ಏ.29) ಬೆಳಿಗ್ಗೆ ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -2 ರ ಕನ್ನಡ ವಿಷಯದ ಪರೀಕ್ಷೆಗೆ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿತರಾಗಿದ್ದ ಒಟ್ಟು 1213 ವಿದ್ಯಾರ್ಥಿಗಳ ಪೈಕಿ 981 ವಿದ್ಯಾರ್ಥಿಗಳು ಹಾಜರಾಗಿದ್ದರು. ಮತ್ತು 232 ವಿದ್ಯಾರ್ಥಿಗಳು ಗೈರು ಹಾಜರು ಉಳಿದಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲಾಡಳಿತ ನಗರದ ಆರ್‌.ಎಲ್‌.ಎಸ್‌. ಪಿಯು ಕಾಲೇಜದಲ್ಲಿ ಸ್ಥಾಪಿಸಿರುವ ಅಂಚೆ ಮತಪತ್ರ ವಿನಿಮಯ ಕೇಂದ್ರಕ್ಕೆ ಇಂದು (ಏ.29) ವಿವಿಧ ಜಿಲ್ಲೆಗಳಿಂದ ಅಂಚೆಮತಪತ್ರಗಳ ವಿನಿಮಯಕ್ಕಾಗಿ ಅಂಚೆಮತಪತ್ರಗಳೊಂದಿಗೆ ಚುನಾವಣಾ ಸಿಬ್ಬಂದಿಗಳು ಆಗಮಿಸಿ, ವಿನಿಮಯ ಮಾಡಿಕೊಂಡರು.