ಮಕ್ಕಳ ಸಾಹಿತ್ಯದ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಬೇಕು: ಜಂಬುನಾಥ ಕಂಚಾಣಿ
Scientific attitude should be developed through children's literature: Jambunath Kanchani
ಲೋಕದರ್ಶನ ವರದಿ
ವಿಜಯಪುರ, 31: ಶೈಶವಾವಸ್ಥೆ, ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯಲ್ಲಿರುವ ಎಲ್ಲ ಮಕ್ಕಳೂ ಒಂದೇ ರೀತಿಯವರಾಗಿರುವುದಿಲ್ಲ. ಅವರ ಬೌದ್ಧಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮುಗ್ಧ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಮಕ್ಕಳ ಸಾಹಿತಿ ಜಂಬುನಾಥ ಕಂಚಾಣಿ ಹೇಳಿದರು.
ಮಕ್ಕಳಲ್ಲಿ ಸತ್ಯ-ಅಸತ್ಯ, ನೋವು-ನಲಿವು, ಅಜ್ಞಾನ-ಸುಜ್ಞಾನ ನಡುವಿನ ವ್ಯತ್ಯಾಸವನ್ನು ತಿಳಿಸಬೇಕು. ಮೂಢನಂಬಿಕೆಗಳಿಂದ ದೂರವಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಪರೀಶೀಲಿಸುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಅವರು ಹೇಳಿದರು.
ನಗರದ ಪ್ರಗತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರೊ. ಎ.ಎಸ್. ಹಿಪ್ಪರಗಿ ಪ್ರತಿಷ್ಠಾನ ಹಾಗೂ ಪ್ರಗತಿ ಶಾಲೆಯ ಸಂಯುಕ್ತ ಆಶಯದಲ್ಲಿ ನಡೆದ ಎಂ.ಪಿ. ಮಠ ಮತ್ತು ವೀರಭದ್ರಯ್ಯ ಸಾರಂಗಮಠ ದತ್ತಿ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂತಹ ಪುಣ್ಯಾತ್ಮರ ಬದುಕನ್ನು ಸ್ಮರಿಸಿಕೊಳ್ಳುವುದರಿಂದ ಅಲ್ಪಮಟ್ಟಿಗಾದರೂ ಅವರ ಋಣ ತೀರಿಸಿ, ಶಾಂತಿ ಹಾಗೂ ನೆಮ್ಮದಿ ಪಡೆಯಲು ಸಾಧ್ಯ ಎಂದರು. ಪ್ರಗತಿ ಶಾಲೆಯ ಆಡಳಿತಾಧಿಕಾರಿ ಸಿದ್ಧಲಿಂಗ ಮನಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಡಿ.ಐ.ಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್. ಶಿವಣಗಿ ಅತಿಥಿಗಳನ್ನು ಸ್ವಾಗತಿಸಿ ಗೌರವ ಸಮರೆ್ಣ ಮಾಡಿದರು. ಬಿ.ಕೆ. ಗೊಟ್ಯಾಳ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಹಿಪ್ಪರಗಿ ವಂದನಾರೆ್ಣ ನೆರವೇರಿಸಿದರು.
ವಿದ್ಯಾವತಿ ಅಂಗಲಗಿ, ಎಸ್.ಜಿ. ನಾಡಗೌಡರ, ವಿ.ಸಿ. ನಾಗಠಾಣ, ಮುಖ್ಯಾಧ್ಯಾಪಕ ಬಿ.ಎಸ್. ಬಿರಾದಾರ, ಎಸ್.ಬಿ. ದೊಡಮನಿ ದಂಪತಿ, ಜಿ.ಬಿ. ಸಾಲಕ್ಕಿ, ವಾಲಿಕಾರ, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 