ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ

ಶೇಡಬಾಳ 29: ವಿಜ್ಞಾನದ ವಿಷಯವಾಗಿ ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಜ್ಞಾನ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಶೇಡಬಾಳದ ಸನ್ಮತಿ ವಿದ್ಯಾಲಯದ ವಿಜ್ಞಾನ ಶಿಕ್ಷಕರಾದ ಎಸ್.ಡಿ.ಮುತಾಲಿಕ ಹೇಳಿದರು.

ಅವರು ಶುಕ್ರವಾರ ದಿ. 28 ರಂದು ಶೇಡಬಾಳ ಗ್ರಾಮದ ಪರಮ ಪೂಜ್ಯ ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿ ಮಾತನಾಡುತ್ತಿದ್ದರು. ಮತ್ತೊರ್ವ ನಿರ್ಣಾಯಕರಾಗಿ ಆಗಮಿಸಿದ ಸನ್ಮತಿ ವಿದ್ಯಾಲಯದ ವಿಜ್ಞಾನ ಶಿಕ್ಷಕರಾದ ಜಿ.ಎನ್.ಹೆಬ್ಬಾಳೆ ವಿದ್ಯಾರ್ಥಿಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಕೊಳವೆ ಬಾವಿ ಯಂತ್ರ, ದೋಣಿ, ವಿಮಾನ, ವಿದ್ಯುತ್ ಉತ್ಪಾದನೆ, ನಾಣ್ಯ ಹಾಕುವ ಯಂತ್ರ, ಸೌರಶಕ್ತಿಯ ವಿದ್ಯುತ್ ಬಳಕೆ, ಆಮ್ಲ ಮಳೆ, ಜೆಸಿಬಿ ಯಂತ್ರ ಸೇರಿದಂತೆ ಅನೇಕ ಅವಿಸ್ಕಾರಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.

ವಿಜ್ಞಾನ ಮತ್ತು ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಮಳೆ ನೀರು ಕೊಯ್ಲು ವಿಷಯದಲ್ಲಿ ಪ್ರಥಮ ಸ್ಥಾನ ಶ್ರಾವಣಿ ಸುರೇಶ ಕದ್ದು, ದ್ವೀತಿಯ ಸೃಷ್ಟಿ ತಳವಾರ, ತೃತೀಯ ಆದಿತಿ ಮುತಾಲಿಕ, ಪ್ಲಾಸ್ಟಿಕ್ನ ಮರು ಚಕ್ರೀಕರಣ ವಿಷಯದಲ್ಲಿ ಪ್ರಥಮ ಸ್ಥಾನ ಶ್ರೀವೀರ ತೀರ್ಥ, ದ್ವೀತಿಯ ಸ್ಥಾನ ರಿಹಾನ ಸುದರಣಿ, ತೃತೀಯ ಸ್ಥಾನ ಸುದೀಪ ಮಾಳಿ, ಆಮ್ಲ ಮಳೆ ವಿಷಯದಲ್ಲಿ ಪ್ರಥಮ ಸ್ಥಾನ ಸುದರ್ಶನ ನಡೋಣಿ, ದ್ವೀತಿಯ ಸ್ಥಾನ ಪ್ರಜ್ವಲ ಕಾಂಬಳೆ, ತೃತೀಯ ಸ್ಥಾನ ಸೌರಭ ಚಿಂಚಲೆ ವಿದ್ಯಾರ್ಥಿಗಳು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. 

 ಈ ಸಮಯದಲ್ಲಿ ಸಂಸ್ಥೆಯ ಸಂಚಾಲಕರಾದ ಪ್ರಕಾಶ ನಾಂದ್ರೆ, ನೇಮಿನಾಥ ನರಸಗೌಡರ, ಮಹಾವೀರ ಸಾಬಣ್ಣವರ, ಎಸ್.ಟಿ.ನಾಂದ್ರೆ, ಬಿ.ಬಿ.ನಾಂದ್ರೆ, ಬಾಹುಬಲಿ ನಾಂದ್ರೆ ಸೇರಿದಂತೆ ಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಪಾಲಕರು ಅಪಾರ ಸಂಖ್ಯೆಯಲ್ಲಿ ಇದ್ದರು.