ಸತ್ಕಾರ್ಯದಿಂದ ಜೀವನ ಸಾರ್ಥಕ : ಡಾ.ಪ್ರಸಾನಂದ

Life is meaningful through good deeds: Dr. Prasananda

ಲೋಕದರ್ಶನ ವರದಿ 

ಸತ್ಕಾರ್ಯದಿಂದ ಜೀವನ ಸಾರ್ಥಕ : ಡಾ.ಪ್ರಸಾನಂದ  

ಯರಗಟ್ಟಿ, 05 : ಧಾನ, ಧರ್ಮ, ಸತ್ಕಾರ್ಯ, ಪುಣ್ಯ ಕಾರ್ಯಗಳನ್ನು ಮಾಡಿ ಸದ್ಗುರುವಿನ ಸೇವೆಯ ಮೂಲಕ ಪರಮಾತ್ಮನ ಕೃಪೆಗೆ ಪಾತ್ರರಾಗಿ ಮುಂದಿನ ಜನ್ಮದಲ್ಲಿಯೂ ಮನುಷ್ಯರಾಗಿ ಜನ್ಮತಾಳುತ್ತಾರೆಂದು ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜಿ ಹೇಳಿದರು. 

ಪಟ್ಟಣದ ರಾಜರಾಜೇಶ್ವರಿ ಆಶ್ರಮ ಆವರಣದಲ್ಲಿ ರವಿವಾರ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 16ನೇ ವರ್ಷ ವೇದಾಂತ ಪರಿಷತ್ ಹಾಗೂ ತತ್ವ ಚಿಂತನೆ, ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಜಿಗಳ ತುಲಾಬಾರ ಸ್ವಿಕರೀಸಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು ಮನುಷ್ಯ ಜೀವನದಲ್ಲಿ ಪ್ರತಿಯೂಬ್ಬರಿಗೂ ಸುಖ, ದುಖ: ಬಂದು ಹೊಗುತ್ತವೆ, ಸುಖ ಬಂದಾಗ ಹಿಗ್ಗದೆ ದುಖ: ಬಂದಾಗ ಕುಗ್ಗದೇ, ಸ್ಥಿತ ಪ್ರಜ್ಞರಾಗಿ ಬದುಕಬೇಕು ಎಂದು ಹೇಳಿದರು. 

ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ ನಾನು ನನ್ನದು, ಎನ್ನುವುದಕ್ಕಿಂತ ಎಲ್ಲವೂ ಪರಾತ್ಮನದು ಎಂಬ ಭಾವ ತಾಳಬೇಕು, ಮಾನವನಾಗಿ ಜನಸಿದ ಮೇಲೆ ಪರೋಪಕಾರ ಭಾವನೆ ಬೆಳಸಿಕೊಳ್ಳಬೇಕು, ಮಾನವನ ಜನ್ಮ ಸಾರ್ಥಕವಾಗಲು ಒಳ್ಳೆಯ ಆಚಾರ, ವಿಚಾರ, ನಡತೆ, ಗುಣ ಬೆಳಸಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಬದುಕಲು ಸಾಧ್ಯ ಎಂದರು. 

ದೇವಿಗೆ ವಿವಿಧ ಹೂಮಾಲೆಗಳಿಂದ ಅಲಂಕಾರ, ಹಾಲಿನ ಅಭಿಷೇಕ, ಚಂಡಿಕಾ ಹೋಮ ಹನಗಳಿಂದ ಪೂಜೆ ನೆರವೆರಿತು. ರಾಜರಾಜೇಶ್ವರಿ ಮಠದ ಗಣಪತಿ ಸ್ವಾಮೀಜಿಗೆ, ರಾಜನಹಳ್ಳಿ ಮಠದ ಪ್ರಸನ್ನಾನಂದ ಸ್ವಾಮೀಜಿಗಳಿಗೆ ತುಲಾಭಾರ, ಕೀರಟ ಧಾರಣೆ, ತಾವಂಶಿ, ಪವಾರ ಕುಟುಂಬಗಳಿಂದ ನೆರವೇರಿತು. ಮತ್ತು ದಾನಿಗಳಿಗೆ ಸನ್ಮಾನಿಸಲಾಯಿತು.   

ಬಳ್ಳೂರ ಮಠದ ವಿದ್ಯಾನಂದ ಭಾರತಿ ಸ್ವಾಮೀಜಿ, ಕುಳ್ಳೂರ ಮಠದ ಬಸವಾನಂದ ಭಾರತಿ ಸ್ವಾಮೀಜಿ, ಸೋಮಾಪೂರ ಮಠದ ಜಯದೇವ ಸ್ವಾಮೀಜಿ, ಹಡಗಿನಾಳ ಮಠದ ಮಲ್ಲೇಶ ಶರಣರು, ಶಿರೋಳ ಮಠದ ಅಭಿನವ ಎಚ್ಚರಸ್ವಾಮೀಜಿ, ಕೋ.ಶಿವಾಪೂರ ಸಿದ್ದಸಂಸ್ಥಾನಮಠದ ಚರಂತಯ್ಯ ದೇವರು, ಅಂತೂರ ಬೆಂತೂರ ಮಠದ ಗುರುದೇವ ಸ್ವಾಮೀಜಿ, ಯರಝರ್ವಿ ಮಠದ ಚಿದಾನಂದ, ಸಾನಿಧ್ಯ ವಹಿಸಿದ್ದರು. ಲಕ್ಕಪ್ಪ ಸನ್ನಿಂಗಿನವರ, ಶಂಕರ ಇಟ್ನಾಳ, ರಾಜೇಂದ್ರ ಶಟ್ಟಿ, ಸೋಮನಗೌಡ ದ್ಯಾಮನಗೌಡ, ಬಾಸ್ಕರ ಹಿರೇಮೇತ್ರಿ, ಶಿವಾನಂದ ಕರಿಗೋಣ್ಣವರ, ಚಿದಂಬರ ಕದಂ, ಕಾಳಪ್ಪ ಬಡಗೇರ, ಸತ್ಯಪ್ಪ ನಾಯ್ಕರ, ಆಶಾ ಪರೀಟಿ ಮೈತ್ರಾ ಹೊಂಗಲ, ಸುಜಾತಾ ಸಿದ್ದನಗೌಡ್ರ ಇದ್ದರು.