ವಿದ್ಯಾರ್ಥಿಗಳ ಪ್ರಭಾತ್ ಪೇರಿಯೊಂದಿಗೆ ಶಾಲಾ ಪ್ರಾರಂಭೋತ್ಸವ

ವಿದ್ಯಾರ್ಥಿಗಳ  ಪ್ರಭಾತ್ ಪೇರಿಯೊಂದಿಗೆ ಶಾಲಾ ಪ್ರಾರಂಭೋತ್ಸವ  School commencement ceremony with students' morning prayers

ಮುಗಳಖೋಡ 02: ಪಟ್ಟಣದ ಪಿ ಎಂ ಶ್ರೀ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಪ್ರಾರಂಭೋತ್ಸವ ನಿಮಿತ್ಯ ಶಾಲಾ ಮಕ್ಕಳಿಂದ ಪ್ರಭಾತ್ ಪೇರಿ ನಡೆಸಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಹುಮ್ಮಸ್ಸಿನಿಂದ ಆಗಮಿಸಿದ್ದರು.   ಬಳಿಕ ಹಮ್ಮಿಕೊಳ್ಳಲಾಗಿದ್ದ,  ಪ್ರಭಾತ್ ತೇರಿ ಹಾಗೂ ಶಾಲಾ ದಾಖಲಾತಿ ಅಭಿಯಾನ ಹಾಗೂ . ಎತ್ತಿನಗಾಡಿಯ ಮೂಲಕ ಪ್ರಭಾತ್ ಪೇರಿಗೆ ಗಣ್ಯಮಾನ್ಯರಿಂದ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಶೈಕ್ಷಣಿಕ ಜಾಗ್ರತಾ ಘೋಷಣೆಗಳನ್ನು ಹೇಳುತ್ತ ಸಾಗಿದ ಪ್ರಭಾತ್ ಪೇರಿ ಶಾಲೆ ತಲುಪಿದ ಬಳಕ ಸಮಾಪ್ತಿ ಆಯ್ತು.  ನಂತರ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ  ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.  ಈ ಸಂದರ್ಭದಲ್ಲಿ ಮುಗಳಖೋಡ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಸಿ ಬಾಗೆನ್ನವರ,  ಶಾಲೆಯ ಮುಖ್ಯ ಗುರುಗಳಾದ ಎಮ್ ಕೆ ಪತ್ತಾರ,  ಸಹ ಶಿಕ್ಷಕ ಪಿ ಬಿ ಗಸ್ತಿ,  ಸಹ ಶಿಕ್ಷಕ, ಶಿಕ್ಷಕಿಯರು ಶಾಲಾ ಮಕ್ಕಳು  ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಮಕ್ಕಳ ಪಾಲಕರು ಹಾಜರಿದ್ದರು.