ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನೋತ್ಸವ

ಕಾರಟಗಿ 03:  ಮರ್ಲಾನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮ ದಿನೋತ್ಸವ ಆಚರಿಸಲಾಯಿತು.  

ನಂತರ ಮಾತನಾಡಿದ ಪ್ರಶಿಕ್ಷಣಾರ್ಥಿ ರಾಘವೇಂದ್ರ ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಖ್ಯಾತ ಸಮಾಜ ಸುಧಾರಕ ಜ್ಯೋತಿಬಾಯಿ ಫುಲೆಯವರ ಹೆಂಡತಿ ಸ್ವತಃ ಕವಯತ್ರಿಯಾದ ಇವರು ಮಹಾರಾಷ್ಟ್ರದಲ್ಲಿ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದರು. ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಇವರನ್ನು ಗುರುತಿಸುತ್ತಾರೆ. ಇದರ ಜೊತೆಗೆ ಅವರೊಬ್ಬ ಅಪ್ಪಟ ಸ್ತ್ರೀವಾದಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಸಾಮಾಜಿಕ ಸುಧಾರಕಿಯಾಗಿದ್ದರು. ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಬಾಲಕಿಯರ ಮೊದಲ  ಶಾಲೆಯನ್ನು ಪ್ರಾರಂಭಿಸಿಸುವ ಮೂಲಕ ಭಾರತದ ಮೊದಲ ಮಹಿಳಾ ಶಾಲೆ ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ.   

ಈ ವೇಳೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ  ಸಾವಿತ್ರಿ ಮಲ್ಲನಗೌಡ ಕಾವೇರಿ ಬಾಯಿ ವಸುಧಾ ಪುಷ್ಪಾ ಅಂಜಿನಯ್ಯ ಮತ್ತು ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.