ಸಂತೂಬಾಯಿದೇವಿ ಜಾತ್ರಾ ಮಹೋತ್ಸವ

ರಾಯಬಾಗ 13: ಪಟ್ಟಣದ ಸಂತೂಬಾಯಿದೇವಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಿಗ್ಗೆ ಸುಮಂಗಲೆಯರಿಂದ ಕುಂಭಮೇಳ ಮೆರವಣಿ ನಡೆಯಿತು. ನಂತರ ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ದೇವಿಗೆ ನೈವೇದ್ಯ, ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.