‘ಸಂತನಾಕ’ ಕಿರು ನಾಟಕ ಲೋಕಾರೆ​‍್ಣ

 ‘ಸಂತನಾಕ’ ಕಿರು ನಾಟಕ ಲೋಕಾರೆ​‍್ಣ Santanaaka' Short Play Released

ಲೋಕದರ್ಶನ ವರದಿ 

 ‘ಸಂತನಾಕ’ ಕಿರು ನಾಟಕ ಲೋಕಾರೆ​‍್ಣ 


ಧಾರವಾಡ 12:  ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ತಾಮ್ರಶಾಸನೋಕ್ತ ಜೀವಪರ ನಿಲುವಿನ ಕೃತಿ **‘ಸಂತನಾಕ’** ಎಂಬ ಐತಿಹಾಸಿಕ ಕಿರು ನಾಟಕವನ್ನು ರಚಿಸಿದ್ದು, ಧಾರವಾಡದ ಕವಿವಿ ಡಾ.ಆರಿ​‍್ಸ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಶನಿವಾರ ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಅವರು ಲೋಕಾರೆ​‍್ಣ ಮಾಡಿದರು.  

ಬೆಳಗಾವಿ ಜಿಲ್ಲೆಯ ಬೇಡಕಿಹಾಳ ಗ್ರಾಮದ ತಾಮ್ರಶಾಸನದ ವಿಷಯವಸ್ತುವನ್ನು ಆಧರಿಸಿದ ಈ ನಾಟಕವು ಬರಗಾಲದ ಸಂದರ್ಭದಲ್ಲಿ ಹಸಿವು ನೀಗಿಸಿಕೊಳ್ಳಲು ನಡೆದ ಸಾಮೂಹಿಕ ಹತ್ಯೆಯ ದಾರುಣ ಘಟನೆಯನ್ನು ಕೇಂದ್ರವಾಗಿಸಿಕೊಂಡಿದೆ. ಒಟ್ಟು ಆರು ದೃಶ್ಯಗಳಲ್ಲಿ 16 ಪಾತ್ರಗಳ ಮೂಲಕ ಕಥಾವಸ್ತುವನ್ನು ನಿರೂಪಿಸಲಾಗಿದೆ.  

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರ, ಇತಿಹಾಸದ ಅವಶೇಷಗಳಲ್ಲಿ ಸತ್ಯವನ್ನು ಸಂಶೋಧಿಸುತ್ತಿದ್ದ ಡಾ. ಜೆ.ಎಂ. ನಾಗಯ್ಯ ಅವರು ಸೃಜನಶೀಲ ಸಾಹಿತ್ಯದ ಮೂಲಕ ನಾಟಕ ಪರಂಪರೆಗೆ ಮರಳಿರುವುದು ಸಂತಸದ ಸಂಗತಿ ಎಂದರು.  

ಕೃತಿಯನ್ನು ಪರಿಚಯಿಸಿದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ನಾಟಕದಲ್ಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಸೊಗಡು ಎದ್ದು ಕಾಣುತ್ತಿದ್ದು, ಹಿಂಸೆಯನ್ನು ಒಪ್ಪದ ಭಾವನೆ ಕೇಂದ್ರಿತವಾಗಿದೆ ಎಂದು ಹೇಳಿದರು.  

ಕವಿವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳು, ಸಂಶೋಧಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಡಾ. ಮಲ್ಲಪ್ಪ ಬಂಡಿ ಸ್ವಾಗತಿಸಿದರು. ಸುಷ್ಮಾ ಹೊಳೆಯಣ್ಣವರ ಹಾಗೂ ಮಮತಾಜ್ ಬೇಗಂ ನಿರೂಪಿಸಿದರು. ಮಂಜುನಾಥ ಬಗಲಿ ವಂದಿಸಿದರು.