ಸಂಗಮೇಶ್ವರ ಮಹಾರಾಜರ ಜಯಂತಿ: 28ರಿಂದ ವಿವಿಧ ಕಾರ್ಯಕ್ರಮ

ಜಮಖಂಡಿ 25: ಹಿಪ್ಪರಗಿ ಗ್ರಾಮದಲ್ಲಿ ಸಂಗಮೇಶ್ವರ ದೇವಸ್ಥಾನ ಟ್ರಸ್ಟ ಕಮೀಟಿ ಇವರ ಆಶ್ರಯದಲ್ಲಿ ಸಂಗಮೇಶ್ವರ ಮಹಾರಾಜರ 130ನೇ ಜಯಂತಿ ಮಹೋತ್ಸವ ನಿಮಿತ್ಯವಾಗಿ ಏ. 28ರಿಂದ 30ರವರಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  

ಪ್ರಥಮ ಬಾರಿಗೆ ಸಂಗಮೇಶ್ವರ ಮಹಾರಾಜ ಜಯಂತಿ ಆಚರಿಸಲಾಗಿತ್ತಿದ್ದು ಮಹಾರಾಜರು ಐಕ್ಯವಾದ ಗ್ರಾಮದ ಹುಕ್ಕೇರಿಯವರ ಮನೆಯಲ್ಲಿ ಅವರ ಜಯಂತಿ ಆಚರಿಸುತ್ತಿರುವುದು ವಿಶೇಷ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಕ್ಕೇರಿ ಕ್ಯಾರಿ ಗುಡ್ಡದ ಮಠದ ಮಲ್ಲಪ್ಪ ಮಹಾರಾಜರು ನೇತೃತ್ವವನ್ನು ಶುರ​‍್ಾಲಿಯ  ಗೀರೀಶಾನಂದ ಮಹಾರಾಜರು ಉದ್ಘಾಟನೆಯನ್ನು ಸಂಗಮೇಶ್ವರ ಮಹಾರಾಜರ ಮೊಮ್ಮಗನಾದ ರಮಾಮಣಿ ಶಂಬುಲಿಂಗ್ಯಾ ಮಠದ ವಹಿಸಿಕೊಳ್ಳುವರು. ವೀಣೆ ಪೂಜೆ ಸಂಗಮೇಶ್ವರ ಗುಡಿಯ ಟ್ರಸ್ಟ ಕಮೀಟಿಯ ಅಧ್ಯಕ್ಷ ಹುಕ್ಕೇರಿಯವರು ನೆರವೇರಿಸುವರು.  

ಗ್ರಾಮದಲ್ಲಿ ಮೂರು ದಿನಗಳ ಕಾಲ ಸಂಗಮೇಶ್ವರ ಮಹಾರಾಜ ಜಯಂತಿಯ ಮಹೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಪೂಜೆ ಪುನಸ್ಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರಣ ಸಕಲ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಬೇಕೆಂದು ಗುಡಿ ಟ್ರಸ್ಟ ಕಮೀಟಿಯ ಪ್ರಧಾನ ಕಾರ್ಯದರ್ಶಿ ಎಸ್‌. ಎಂ. ಪಾಟೀಲ ಪ್ರಕಟಣೆಗೆ ತಿಳಿಸಿದ್ದಾರೆ.