ಕಡಿಮೆ ಬೆಲೆಯಲ್ಲಿ ಪಿವ್ಹಿಸಿ ಪೈಪ್‌ಗಳ ಮಾರಾಟ: ರೈತರಿಗೆ ಲಾಭ ಪಡೆದುಕೊಳ್ಳಲು ಶ್ರೀಮಂತ ಪಾಟೀಲ ಕರೆ

ಅಥಣಿ 30: ರೈತರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಪಿವ್ಹಿಸಿ ಪೈಪಗಳನ್ನು ಕೆಂಪವಾಡದ ಅಲ್ಫಾ ಅಗ್ರೋಟೆಕ್ ಇಂಡಸ್ಟ್ರಿ ಮೂಲಕ ನೇರವಾಗಿ ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅಥಣಿ ಶುಗರ್ಸನ ಚೇರಮನ್ ಶ್ರೀಮಂತ ಪಾಟೀಲ ಮನವಿ ಮಾಡಿದರು.  

ಅವರು ಅಲ್ಫಾ ಅಗ್ರೋಟೆಕ್ ನಲ್ಲಿ ತಯಾರಿಸಿದ ಪಿವ್ಹಿಸಿ ಪೈಪಗಳ ಮೊದಲ ಲೋಡ್ ನ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.     ಪಿವ್ಹಿಸಿ ಪೈಪಗಳ ಗುಣಮಟ್ಟದಲ್ಲಿ ರೇಸಿಂಗ ಪ್ರಮಾಣ ಬಹಳ ಮಹತ್ವದ್ದಾಗಿರುತ್ತದೆ ಸಾಮಾನ್ಯವಾಗಿ ಅ90 ರಷ್ಟು ರೇಸಿಂಗ ಬಳಸಿ ಪೈಪಗಳನ್ನು ತಯಾರಿಸಲಾಗುತ್ತದೆ ಆದರೆ ಅಲ್ಫಾ ಅಗ್ರೋಟೆಕ್ ನಲ್ಲಿ ಉತ್ಪಾದಿಸಿದ ಪಿವ್ಹಿಸಿ ಪೈಪಗಳಲ್ಲಿ ರೇಸಿಂಗ ಪ್ರಮಾಣ 92 ಅ ರಷ್ಟಿದ್ದು, ಇದು ಪೈಪನ ದೀರ್ಘ ಕಾಲದ ಬಾಳಿಕೆಗೆ ಅನಕೂಲವಾಗಲಿದೆ ಎಂದ ಅವರು ಇಲ್ಲಿ ಉತ್ಪಾದಿಸಿದ ಪೈಪಗಳನ್ನು  ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ರೈತರನ್ನು ನೇರವಾಗಿಯೇ ಸಂಪರ್ಕಿಸಿ ಅವರ ಅವಶ್ಯಕತೆಗೆ ಅನುಸಾರವಾಗಿ ಪೂರೈಕೆ ಮಾಡುತ್ತಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.        

ರೈತ ಮುಖಂಡ ದಾದಾ ಪಾಟೀಲ ಮಾತನಾಡಿ, ರೈತರು ಪೈಪಗಳನ್ನು ಖರೀದಿಸುವ ಮೊದಲು ಟೆಸ್ಟಿಂಗ ಲ್ಯಾಬನಲ್ಲಿ ಪರೀಕ್ಷಿಸಿ ಗುಣಮಟ್ಟ ಧೃಡೀಕರಿಸಿ ಕೊಳ್ಳಲು ಅವಕಾಶ ಇದೆ ಇದರಿಂದ ರೈತರು ಮೋಸ ಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದ ಅವರು ಐ.ಎಸ್‌.ಐ ಮಾರ್ಕನ ಈ ಪೈಪಗಳ ಉತ್ಪಾದನೆ ಈ ಭಾಗದ ರೈತರಿಗೆ ಸಾಕಷ್ಟು ಅನಕೂಲವಾಗಲಿದೆ ಎಂದರು. ಪ್ರಗತಿ ಪರ ರೈತ ರಾಮ ಸೊಡ್ಡಿ ಮಾತನಾಡಿ, ಗುಣಮಟ್ಟದ ಪಿವ್ಹಿಸಿ ಪೈಪಗಳು ಮಾರುಕಟ್ಟೆ ದರಕ್ಕಿಂತ 15 ರಿಂದ 20 ರಷ್ಟು ಕಡಿಮೆ ದರದಲ್ಲಿ ಸಿಗುತ್ತಿರುವುದು ಆರ್ಥಿಕ ಹೊರೆ ಕಡಿಮೆ ಮಾಡಿದಂತಾಗಿದೆ ಎಂದ ಅವರು ಮಾಜಿ ಶಾಸಕ ಶ್ರೀಮಂತ ಪಾಟೀಲ ಮಾಲಿಕತ್ವದ ಉದ್ಯಮದಲ್ಲಿ ನಮ್ಮ ಭಾಗದ 35 ರಿಂದ 40 ಯುವಕರಿಗೆ ಉದ್ಯೋಗ ಕೂಡ ಕೊಡಲಾಗಿದೆ ಎಂದರು. ಯುವ ರೈತ ಡಿ.ಕೆ.ಪವಾರ ಮಾತನಾಡಿ, ಪಿವ್ಹಿಸಿ ಪೈಪಗಳ ಗುಣಮಟ್ಟ ಪರೀಕ್ಚಿಸುವ ಸೌಲಭ್ಯ ನಮಗೆ ಬೇರೆಲ್ಲೂ ದೊರಕಿಲ್ಲ ಇಲ್ಲಿ ಮಾತ್ರ ನಮಗೆ ಈ ಅನಕೂಲ ಕಲ್ಪಿಸಲಾಗಿದೆ ಎಂದ ಅವರು ನಾನೂ ಕೂಡ ಪೈಪಗಳ ಗುಣಮಟ್ಟ ಪರೀಕ್ಷಿಸಿ 250 ಕ್ಕೂ ಹೆಚ್ಚು ಪೈಪಗಳಿಗೆ ಆರ್ಡರ ಕೊಟ್ಟಿರುವೆ ಎಂದರು.         

ಈ ಸಂದರ್ಭದಲ್ಲಿ ಅಲ್ಫಾ ಅಗ್ರೋಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸುಶಾಂತ ಪಾಟೀಲ ಸೇರಿದಂತೆ ಸಿಬ್ಬಂದಿ ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.