ಕೋಗನೂರು ಗ್ರಾಮಸ್ಥರಿಂದ ಹುತಾತ್ಮ ತ್ರಿಮೂರ್ತಿಗಳ ಬಲಿದಾನ ದಿನ ಆಚರಣೆ

ಶಿರಹಟ್ಟಿ 01: ತಾಲೂಕಿನ ಕೋಗನೂರ ಗ್ರಾಮದಲ್ಲಿ ಇಂದು ಸೋಮವಾರ ಹುತಾತ್ಮ ತ್ರಿಮೂರ್ತಿಗಳ ಬಲಿದಾನ ದಿನವನ್ನು ಆಚರಿಸಲಾಯಿತು. ಹುತಾತ್ಮರಿಗೆ ಗೌರವ ಸಲ್ಲಿಸುವುದಕ್ಕೆ ಅಮರ ಜ್ಯೋತಿಯನ್ನು ಗ್ರಾಮದ ಹಿರಿಯರಾದ ವೀರಯ್ಯ ಹಿರೇಮಠ ಹಾಗೂ ಮಡಿವಾಳಪ್ಪ ತಿರಕಪ್ಪನವರ ಅವರು ಸಹಕುಟುಂಬದವರ ನೇತೃತ್ವದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 

ಈ ಮೂಲಕ ವೀರ ಸ್ವಾತಂತ್ರ್ಯ ಹೋರಾಟಗಾರಾದ ಗೋಣೆಪ್ಪ ಕಮತರ ಇವರ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಹುತಾತ್ಮರ ವರ್ತುಲದಲ್ಲಿ ಸ್ವಾತಂತ್ರ ಹೋರಾಟಗಾರರ ವಂಶಸ್ಥರು ಗ್ರಾಮದ ಗುರುಹಿರಿಯರು, ಮುಖಂಡರು, ಯುವಕರು ಎಲ್ಲರೂ ಸೇರಿಕೊಂಡು ಹುತಾತ್ಮ ತ್ರೀಯರ ಮೂರ್ತಿಗಳನ್ನು ಪೂಜೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ಶರಣಬಸವ ಚನ್ನೂರ ಅವರು ಮಾತನಾಡಿ,  ತ್ಯಾಗ ಮತ್ತು ಬಲಿದಾನ ಮಾಡಿದ ವೀರಯೋಧರ ಕುಟುಂಬಗಳಿಗೆ ಯಾವುದೇ ಸರ್ಕಾರಗಳು ಇಲ್ಲಿಯವರೆಗೂ ಯಾವುದೇ ಗೌರವವನ್ನು ನೀಡಿರುವುದಿಲ್ಲ. ಸ್ವಾಂತಂತ್ರ್ಯ ಯೋಧರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಮುಂದಿನ ದಿನಗಳಲ್ಲಿ ನಾವೆಲ್ಲ ಸಂಘಟಿತರಾಗಿ ಅವರ ಕುಟುಂಬಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯೋಣ ಎಂದು ಕರೆ ನೀಡುವುದರೊಂದಿಗೆ ಸ್ವಾತಂತ್ರ ಯೋಧರ ತ್ಯಾಗ ಮತ್ತು ಬಲಿದಾನಗಳು ಮುಂದಿನ ಯುವ ಪೀಳಿಗೆಗೆ ಪ್ರೇರೇಪಣೆಯಾಗಲಿ ಎಂದು ಸ್ವಾತಂತ್ರ್ಯ ಯೋಧರ ಸಿದ್ಧಾಂತಗಳು ಅವರ ಜೀವನ ಚರಿತ್ರೆಯನ್ನು ಸಾರ್ವಜನಿಕರಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ವಿಶ್ವಮಾನವ ಟ್ರಸ್ಟ್‌ ದಾವಣಗೆರೆಯ ಸಂಸ್ಥಾಪಕ ಅಧ್ಯಕ್ಷರಾದ ಆವರಗೆರಿ ರುದ್ರಮುನಿ, ಹಂಸಭಾವಿಯ ಸುನೀಲ್ ಮಡಿವಾಳರ್, ಗ್ರಾಮದ ಹಿರಿಯರಾದ ಬಸಪ್ಪ ಹಳ್ಳೆಪ್ಪನವರ್, ಪ್ರಕಾಶ್ ಅಂಗಡಿ,  ಚೆನ್ನಪ್ಪ ಮಡಿವಾಳರ್, ಧರ್ಮಗೌಡ ಪಾಟೀಲ್, ಬಸವರಾಜ ಭರಮಣ್ಣನವರ, ಶಂಭುಲಿಂಗ ಹಿರೇಮಠ,  ಪುಂಡಲಿಕರೆಡ್ಡಿ ರಡ್ಡೇರ, ಶೇಖಪ್ಪ ಚೂರಿ, ಗುಡದಪ್ಪ ಬ್ಯಾಲಹುಣಸಿ, ಶರೀಫ್ ಪಿಂಜಾರ, ಮಾಲತೇಶ ಕೂರಗುಂದ, ರಮೇಶ ಕೂರಗುಂದ, ರವಿ ಮಟ್ಟಿ, ಸಿದ್ದಾರೂಢ ಚನ್ನೂರ, ಈಶ್ವರ ಮಟ್ಟಿ, ಬಸವರಾಜ ಪೂಜಾರ, ಉಡಚಪ್ಪ ದೊಡ್ಡಮನಿ, ರಾಕೇಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.