2024-25 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಫಲಿತಾಂಶ

SSLC Exam Result 2024-25

2024-25 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಫಲಿತಾಂಶ  

ರಾಣಿಬೆನ್ನೂರ  04: ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್‌  ಕನ್ನಡ ಮಾಧ್ಯಮ ಪ್ರೌಢಶಾಲೆ 2024-25 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶಶೇಕಡಾ 95.45ಅ ಆಗಿದ್ದು ಇದರಲ್ಲಿ 11 ವಿದ್ಯಾರ್ಥಿಗಳ ುಡಿಸ್ಟಿಂಗಷ್ನಲ್ಲಿ ಹಾಗೂ 30 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  

   ಬನಶ್ರೀ ಲಕ್ಷ್ಮೇಶ್ವಿರ 625ಕ್ಕೆ 618 (98.88ಅ) ಅಂಕಪಡೆದು ಶಾಲೆಗೆ ಪ್ರಥಮಸ್ಥಾನ (ಕನ್ನಡ: 125ಕ್ಕೆ 125 ಹಾಗೂ ಗಣಿತ: 100ಕ್ಕೆ 100), ಸಿರಿ. ಅಜ್ಜೇವಡಿಮಠ 625ಕ್ಕೆ 616 (98.56ಅ) ಅಂಕಪಡೆದು ಶಾಲೆಗೆ ದ್ವಿತೀಯಸ್ಥಾನ (ಕನ್ನಡ: 125ಕ್ಕೆ 125, ಸಮಾಜವಿಜ್ಞಾನ: 100ಕ್ಕೆ 100 ಹಾಗೂ ವಿಜ್ಞಾನ: 100ಕ್ಕೆ 100), ಈಶ್ವರಿ. ಚಕ್ರಸಾಲಿ 625ಕ್ಕೆ 612 (97.92ಅ) ಅಂಕಪಡೆದು ಶಾಲೆಗೆ ತೃತೀಯಸ್ಥಾನ (ಕನ್ನಡ: 125ಕ್ಕೆ 125 ಹಾಗೂ ಹಿಂದಿ: 100ಕ್ಕೆ 100)ಹಾಗೂ ಸೃಷ್ಠಿ. ನಾಯಕ 625ಕ್ಕೆ 609 (97.44ಅ) ಅಂಕಪಡೆದು ಶಾಲೆಗೆ ನಾಲ್ಕನೇಸ್ಥಾನ (ಹಿಂದಿ: 100ಕ್ಕೆ 100) ಪಡೆದಿದ್ದಾರೆ.   ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.