ಹಾವೇರಿ: ಸಕರ್ಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ತರುವ ನಿಟ್ಟಿನಲ್ಲಿ ಧಾರವಾಡದಲ್ಲಿ ಎಲ್ಲಾ ಜಿಲ್ಲೆಗಳ ಡಿ.ಡಿ.ಪಿ.ಐ. ಹಾಗೂ ಬಿ.ಇ.ಓ ಕಾಯರ್ಾಗಾರ ಏರ್ಪಡಿಸಿಲಾಗಿದೆ ಎಂದು ಶಿಕ್ಷಣ ಸಚಿವ ಸುರಶ್ಕುಮಾರ್ ಅವರು ಹೇಳಿದರು.
ಜಿಲ್ಲೆಯ ನೆಲೋಗಲ್ ಸಕರ್ಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಯರ್ಾಗಾರದಲ್ಲಿ ಶಾಲೆಗಲ್ಲಿ ಇರುವ ಕೊರತೆಗಳ ಬಗ್ಗೆ ಚಚರ್ಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಯಾವ ರೀತಿಯ ವಿಶೇಷ ಶಿಕ್ಷಣ ನೀಡಬಹುದು ಎಂದು ಕಾರ್ಯಗಾರದಲ್ಲಿ ಸಮಾಲೋಚಿಸಲಾಗುವುದು. ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಕುರಿತಂತೆ ಜಿಲ್ಲೆಗಳಲ್ಲಿ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ನಿದರ್ೇಶನ ನೀಡಲಾಗಿದೆ. ಸಿಇಒಗಳೇ ಖುದ್ದಾಗಿ ಶಾಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
2017ರಲ್ಲಿ ಅವಧಿಯಲ್ಲಿ ಕಡ್ಡಾಯ ವಗರ್ಾವಣೆ ನೀತಿ ಜಾರಿಗೆ ತರಲಾಗಿತ್ತು. ಕಡ್ಡಾಯ ನಿವೃತ್ತಿ, ಕಡ್ಡಾಯ ರಜೆ ಎನ್ನುವುದು ಶಿಕ್ಷಾರ್ಹ ಪದಗಳಾಗಿವೆ. ಹಾಗಾಗಿ ಈ ಇದನ್ನು ಬದಲಿಸಿ ಶಿಕ್ಷಕ ಸ್ನೇಹಿ ವಗರ್ಾವಣೆ ನೀತಿ ರೂಪಿಸಲಾಗಿದೆ. ಬರುವ ವಿಧಾನ ಮಂಡಲದಲ್ಲಿ ನೀತಿಯನ್ನು ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಲಾಗುವುದು. ಶಾಲೆ ಹಾಗೂ ಶಿಕ್ಷಕರಿಗೆ ತೊಂದರೆ ಆಗದಂತೆ ಜೂನ್ ತಿಂಗಳ ಒಳಗಾಗಿ ವಗರ್ಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಶಾಸಕ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನಪ್ಪ ವಡಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಹೆಚ್.ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ.ದುಮ್ಮಿಹಾಳ, ವಿಷಯ ಪರಿವೀಕ್ಷಕರು, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.