ಎಸ್‌ಕೆಡಿಆರ್‌ಡಿಪಿ ಐರಣಿ ಕಾರ್ಯಕ್ಷೇತ್ರ: ದೇವಸ್ಥಾನ ಅಭಿವೃದ್ಧಿಗೆ 50,000 ರೂ.

ರಾಣೇಬೆನ್ನೂರು 21:  ತಾಲೂಕಿನ  ಐರಣಿ ಗ್ರಾಮದ ಮನಿ ಮಠ ಶ್ರೀ ಗುರುಕೊಟ್ಟೂರೇಶ್ವರ ದೇವಸ್ಥಾನದ ಅಭಿವೃದ್ಧಿಗೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ 50, ಸಾವಿರ ರೂಗಳ  ದೇಣಿಗೆ ನೀಡಿ, ಪರಿಪೂರ್ಣ ಅಭಿವೃದ್ಧಿಗಾಗಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆವರು ಹಾರೈಸಿದ್ದಾರೆ.          

ತಾಲೂಕಿನ ಯೋಜನೆ 2ರ, ಯೋಜನಾಧಿಕಾರಿಗಳಾದ ಮಂಜುನಾಥ್ ಎಂ  ಅವರು, ಶ್ರೀ ಕ್ಷೇತ್ರದ ಐವತ್ತು ಸಾವಿರ ರೂ ಮೌಲ್ಯದ ಹುಂಡಿ ಯನ್ನು, ದೇವಸ್ಥಾನ ಸಮಿತಿಯ, ಅಧ್ಯಕ್ಷ ಪದಾಧಿಕಾರಿಗಳಿಗೆ ಹತ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಾಲಯಗಳು ಮನುಷ್ಯನಿಗೆ, ಸದಾಕಾಲ ಭಕ್ತಿ, ಮತ್ತು ಭಾವ ಜೊತೆಗೆ ಮಾನಸಿಕವಾಗಿ ಶಾಂತಿ ಮತ್ತು ನೆಮ್ಮದಿ ನೀಡುವ ತಾಣಗಳಾಗಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಹೇಳಿದರು. ಹುಂಡಿಯನ್ನು ಸ್ವೀಕಾರ ಕಾರ್ಯಕ್ರಮದಲ್ಲಿ, ದೇವಸ್ಥಾನ ಕಮಿಟಿಯ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳುಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ರಮೇಶ್ ಅಂಬಾರಿ, ಸ್ವಾಗತಿಸಿ ನಿರೂಪಿಸಿ ವಂದಿಸಿದರು.