ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರ ಸಭೆ

ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರ ಸಭೆ SDMC members and teachers meeting


ಶಿಂದೊಳ್ಳಿ 07: ಗ್ರಾಮದ ಇಂಡಾಲ ನಗರದ ಸರ್ಕಾರಿ ಕಿರಿಯ ಕನ್ನಡ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರ ಸಭೆ ಜರುಗಿತು. ನಂತರ ಸರ್ವಜ್ಞನ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತಳಾದ ಪ್ರತೀಕ್ಷಾ ರಾ. ಕುಲಕರ್ಣಿ ಇವಳಿಗೆ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನ ಶಿಕ್ಷಕಿ ಅನೂಸಯಾ ಹಿರೇಮಠ, ಸಹ ಶಿಕ್ಷಕಿ ಇಂದಿರಾ ವಿ. ತುಳಸಿಗೇರಿ, ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಬಸವ ಗುರು ಬಳಗದ ಸದಸ್ಯರಾದ ತೋರಣಗಟ್ಟಿ, ಪ್ರವೀಣ ರೊಟ್ಟಿ ಮುಂತಾದವರು ಉಪಸ್ಥಿತರಿದ್ದರು.