ಸಂಕೇಶ್ವರ ಎಸ್‌.ಡಿ.ವ್ಹಿ.ಎಸ್‌. ಸಂಘದ ವಿಜ್ಞಾನ ಕಾಲೇಜ್ ವಿದ್ಯಾರ್ಥಿ ರಾಜ್ಯಕ್ಕೆ 11 ನೇ ರಾ​‍್ಯಂಕ್

ಸಂಕೇಶ್ವರ 15: ಸ್ಥಳೀಯ ಎಸ್‌.ಡಿ.ವ್ಹಿ.ಎಸ್‌. ಸಂಘ ಶಿಕ್ಷಣ ಸಂಸ್ಥೆಗಳು 57 ವರ್ಷಗಳನ್ನು ಪೂರೈಸಿದ್ದು ಶೈಕ್ಷಣಿಕ ಗುಣಮಟ್ಟದಲ್ಲಿ ಖ್ಯಾತಿಯನ್ನು ಪಡೆದಿವೆ.  ಸಂಕೇಶ್ವರದ ಎಸ್‌ಡಿವ್ಹಿಎಸ್ ಸಂಘದ ವಿವಿಧ ಶೈಕ್ಷಣಿಕ ಸಂಸ್ಥೆಗಳ ದ್ವಿತೀಯ ಪಿಯುಸಿ ಫಲಿತಾಂಶದದಲ್ಲಿ ರಾಜ್ಯಮಟ್ಟದಲ್ಲಿ ಹೆಸರುಗಳಿಸಿವೆ.   

ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರತೀಕ ಮಹೇಶ ಪಾಟೀಲ ಈತನು 588/600 ಅಂಕಗಳನ್ನು ಗಳಿಸಿ ಶೇ. 98 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ರಾ​‍್ಯಂಕ್ ಹಾಗೂ  ರಾಜ್ಯಕ್ಕೆ 11 ನೇ ರಾ​‍್ಯಂಕ್ ಗಳಿಸಿ ಮಹಾವಿದ್ಯಾಲಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ.  ಇದರಂತೆ ವಿಜ್ಞಾನ ಮಹಾವಿದ್ಯಾಲಯದ ಸಮಿಯಾ ದಿಲಾವರಮಲಿಕ ನಾಯಿಕವಾಡಿ ಇವಳು 585/600 ಅಂಕಗಳನ್ನು ಶೇ. 97.5 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಸೌಮ್ಯ ಮಹಾದೇವ ಆರೇದ ಇವಳು 584/600 ಅಂಕಗಳನ್ನು ಗಳಿಸಿ ಶೇ. 97.33 ಪಡದು ತೃತೀಯ ಸ್ಥಾನ ಗಿಟ್ಟಿಸಿದ್ದಾಳೆ.   

ಇದರಂತೆ ವಾಣಿಜ್ಯ ಮಹಾವಿದ್ಯಾಲಯದ ಪ್ರಜಾಕ್ತಾ ಠಾಣೆ ಇವಳು 579/600 ಅಂಕಗಳನ್ನು ಗಳಿಸಿ ಶೇ. 96.50 ಅಂಕ ಪಡೆದು ಪ್ರಥಮ ಸ್ಥಾನ, ಅನನ್ಯ ದಗಾಟೆ ಇವಳು 577/600 ಅಂಕಗಳನ್ನು ಪಡೆದು ಶೇ. 96.16 ಅಂಕ ಗಳಿಸಿ ದ್ವಿತೀಯ ಸ್ಥಾನ ಹಾಗೂ ಶ್ವೇತಾ ಪವಾರ ಇವಳು 576/600 ಅಂಕಗಳನ್ನು ಪಡೆದು ಶೇ. 96 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಕಲಾ ಮಹಾವಿದ್ಯಾಲಯದ ಲಕ್ಷ್ಮೀ ಗಡಕರಿ ಇವಳು 566/600 ಅಂಕಗಳನ್ನು ಗಳಿಸಿ ಶೇ. 94.33 ಅಂಕ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ, ನರ್ಗೀಸ್ ಖನದಾಳೆ ಮತ್ತು ಶೃಷ್ಠಿ ಖೋತ ಇವರು 562/600 ಅಂಕಗಳನ್ನು ಪಡೆದು ಶೇ. 93.67 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಮತ್ತು ಐಶ್ವರ್ಯ ಮಾದರ ಇವಳು 558/600 ಅಂಕಗಳನ್ನು ಪಡೆದು ಶೇ. 93 ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.   

ವಿಜ್ಞಾನ ವಿಭಾಗದಲ್ಲಿ ಒಟ್ಟು 283 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 283 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ 140 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ ಶೇಕಡಾ 100 ರಷ್ಟು ಫಲಿತಾಂಶ ಬಂದಿರುತ್ತದೆ.   ಕಲಾ ವಿಭಾಗದಲ್ಲಿ 143 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 135 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 94.41 ರಷ್ಟು ಫಲಿತಾಂಶ ಬಂದಿದೆ.   

ವಿಜ್ಞಾನ ವಿಭಾಗದಲ್ಲಿ 173 ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ 108 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 39 ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ 93 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಕಲಾ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ 102 ವಿದ್ಯಾರ್ಥಿಗಳು ಪ್ರಥಮ ದರ್ಜೆ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. 

ಈ ವಿಷಯವನ್ನು ಎಸ್‌ಡಿವ್ಹಿಎಸ್ ಸಂಘದ ಕಾರ್ಯಾಧ್ಯಕ್ಷರಾದ ಎ.ಬಿ.ಪಾಟೀಲರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.  ನಮ್ಮ ಸಂಸ್ಥೆಯ ವಿದ್ಯಾಲಯಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು  ನೀಡಲಾಗುತ್ತಿದ್ದು, ರಾಜ್ಯ ಮಟ್ಟದಲ್ಲಿ ಉತ್ತಮ ಫಲಿತಾಂಶ ಗಳಿಸಿದೆ ಇದಕ್ಕೆಲ್ಲ ಕಾರಣ ಪ್ರಾಧ್ಯಾಪಕ ವೃಂದ ಮತ್ತು ಪ್ರಾಚಾರ್ಯರಾದ ಎಸ್‌.ಯು.ಯರಗಟ್ಟಿ ಇವರ ಪರಿಶ್ರಮವೇ ಕಾರಣ.  ಇವರೆಲ್ಲರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ರಾತ್ರಿ ಟ್ಯೂಷನ್ ಹೇಳಿ ಬೆಳಗ್ಗೆ 4.30 ಗಂಟೆಗೆ ವಿದ್ಯಾರ್ಥಿಗಳನ್ನು ಎಬ್ಬಿಸಿ ಅಭ್ಯಾಸ ಮಾಡಲು ಪ್ರೋತ್ಸಾಹ ಮಾಡುತ್ತಾರೆ.   ಇಲ್ಲಿ ಶೇ. 40 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಕೂಡ ಪ್ರವೇಶ ನೀಡಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ.  ನಗರದ ಪ್ರದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ರಾ​‍್ಯಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವನ್ನು ನೀಡುತ್ತಾರೆ.  ಅದೂ ಕೂಡ ಹೆಚ್ಚಿನ ಶುಲ್ಕ ನೀಡಿ ಅಲ್ಲಿ ಪ್ರವೇಶವನ್ನು ಪಡೆಯಬೇಕಾಗುತ್ತದೆ.  ಬುದ್ಧಿವಂತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಿ ಅವರನ್ನು ರಾ​‍್ಯಂಕ್ ಪಡೆಯಲು ತರಬೇತಿ ನೀಡುತ್ತಾರೆ.  ಆದರೆ ನಮ್ಮ ಮಹಾವಿದ್ಯಾಲಯಗಳಲ್ಲಿ ಸಾಮಾನ್ಯ ಗುಣಮಟ್ಟದ ವಿದ್ಯಾರ್ಥಿಗಳಿಗೂ ಕೂಡ ಪ್ರವೇಶ ನೀಡಿ ಅವರಿಗಿ ವಿಶೇಷ ತರಬೇತಿ ನೀಡಿ ಉತ್ತಮ ರಾ​‍್ಯಂಕ್ ಪಡೆಯಲು ಶಿಕ್ಷಣವನ್ನು ನೀಡಲಾಗುತ್ತಿದೆ. ಎಂದು ಎ.ಬಿ.ಪಾಟೀಲರು ಹೇಳಿದರು.  ಎಸ್‌ಡಿವ್ಹಿಎಸ್ ಸಂಘದಲ್ಲಿ ಮೊದಲು 7 ಶಾಲೆಗಳು ಮಾತ್ರ ನಡೆಯುತ್ತಿದ್ದವು.  ಈಗ 23 ವಿದ್ಯಾಸಂಸ್ಥೆಗಳು ನಡೆಯುತ್ತಿದ್ದು,  ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ರಾ​‍್ಯಂಕ್ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸತ್ಕಾರವನ್ನು ಮಾಡಲಾಯಿತು.  ಈ ಸಮಾರಂಭದಲ್ಲಿ ಎಸ್‌ಡಿವ್ಹಿಎಸ್ ಸಂಘದ ಆಡಳಿತಾಧಿಕಾರಿ ಬಿ.ಎ.ಪೂಜಾರಿ ಆರಂಭದಲ್ಲಿ ಪತ್ರಿಕಾ ಮಾಧ್ಯಮ ಮಿತ್ರರನ್ನು ಸ್ವಾಗತಿಸಿ ಎಸ್‌ಡಿವ್ಹಿಎಸ್ ಸಂಘದ ಆಶ್ರಯದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ನಡೆದು ಬಂದ ದಾರಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸಂಘದ ನಿರ್ದೇಶಕ ಆರ್‌.ಬಿ.ಪಾಟೀಲ, ಬಾಳಾಸಾಬ ವೈರಾಗಿ, ಡಾ.ಗಣೇಶ ಪಾಟೀಲ, ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.