ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‌.ಬಿ. ಪತ್ರಿಬಸಪ್ಪ ಆಯ್ಕೆ

ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‌.ಬಿ. ಪತ್ರಿಬಸಪ್ಪ ಆಯ್ಕೆ  S.B. Patribasappa elected as the new president of the cooperative society

ಹೂವಿನಹಡಗಲಿ, ಸೆ. 11: ತಾಲೂಕಿನ ಹೊಳಗುಂದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್‌.ಬಿ. ಪತ್ರಿಬಸಪ್ಪ ಅವರು ಆಯ್ಕೆಯಾಗಿದ್ದಾರೆ.  ತಾಲೂಕಿನ ಹೊಳಗುಂದಿ-ಬಾವಿಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್‌.ಬಿ. ಪತ್ರಿಬಸಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಚಾವಡಿ ಗುಡದೀರ​‍್ಪ ಅವರು ನಾಮಪತ್ರ ಸಲ್ಲಿಸಿದ್ದರು.  

ಒಟ್ಟು 13 ನಿರ್ದೇಶಕರ ಪೈಕಿ ಚಾವಡಿ ಗುಡದೀರ​‍್ಪ ಅವರು 5 ಮತಗಳನ್ನು ಪಡೆದರೆ, ಎಸ್‌.ಬಿ. ಪತ್ರಿಬಸಪ್ಪ ಅವರು 8 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.  ಚುನಾವಣಾಧಿಕಾರಿ ಪರವೀನ್ ಡಿ. ನಾಯಕ್ ಅವರು ಫಲಿತಾಂಶವನ್ನು ಪ್ರಕಟಿಸಿ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.  

ಉಪಾಧ್ಯಕ್ಷರಾಗಿ ಎನ್‌.ಎಸ್‌. ಸುಮಂಗಲಾ ಅವರು ಆಯ್ಕೆಯಾದರು. ನಿರ್ದೇಶಕರಾದ ಕಾತರಿಕಿ ಕರಬಸಪ್ಪ, ಗುರು ಬಸವರಾಜ ಹಲಗಪ್ಪನವರ, ಎಂ. ನೆಪೋಲಿಯನ್, ಸಿ.ಜಿ. ವೀರನಗೌಡ, ವೀರೇಶ್ ಸೋಗಿ, ಕೊಟ್ರೇಶ್ ತುಪ್ಪದ, ಪರಶುರಾಮಪ್ಪ ತಳವಾರ್, ಮೃತ್ಯುಂಜಯ, ಚಂದ್ರ​‍್ಪ, ವಿ. ಮಂಜಯ್ಯ ನಾಯಕ್, ಡಿ. ವೀರೇಶ್ ಹಾಗೂ ಬ್ಯಾಂಕ್ ಪ್ರತಿನಿಧಿ ಸೇರಿದಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಎಚ್‌. ಕರಬಸಪ್ಪ, ಎಂ. ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಡಾರ​‍್ಪ, ಯಮನೂರ​‍್ಪ, ಅಜ್ಜಪ್ಪ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾತರಿಕಿ ಕರಬಸಪ್ಪ, ವಿನಾಯಕ್ ಹಾಗೂ ಪ್ರಶಾಂತ್ ಸೇರಿದಂತೆ ಹಲವರು ಅಭಿನಂದಿಸಿದರು.