ರಾಣೆಬೆನ್ನೂರಿನಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ
Rural Police Station building inaugurated in Ranebennur
ರಾಣಿಬೆನ್ನೂರ 23: ಕರ್ನಾಟಕ ಸರಕಾರದ ಈಗಿನ ಮುಖ್ಯಮಂತ್ರಿ ಯಾಗಿರುವ ಡಿಕೆ ಶಿವಕುಮಾರ ಅವರು ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡುವದಾಗಿ ಭರವಸೆ ನೀಡಿದ್ದರು ಎಂದು ವಿಧಾನಸಭೆಯ ಹಂಗಾಮಿ ಅಧ್ಯಕ್ಷ ರುದ್ರ್ಪ ಲಮಾಣಿ ಅಭಿಪ್ರಾಯ ಪಟ್ಟರು.ಮಂಗಳವಾರದಂದು ಸ್ಥಳೀಯ ಹಳೆ ಪಿ.ಬಿ.ರಸ್ತೆಯ ಶಿವಾ ಕಾಲೇಜ್ ಬಳಿ ನೂತನವಾಗಿ ನಿರ್ಮಾಣವಾಗಿರುವ ರಾಣಿಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಾನಿನ್ನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನಗೆ ವಿಧಾನಸಭಾ ಹಂಗಾಮಿ ಅಧ್ಯಕ್ಷರಿಗಿಂತಲೂ ಸಚಿವನಾಗಿ ರಾಜ್ಯದ ಅಭಿವೃದ್ಧಿ ಮಾಡುವ ಕಳಕಳಿ, ಮಹಾದಾಸೆ ನನಗಿದೆ ಎಂದರು. ಈಗ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಲ್ಲವೇ ಸಚಿವ ಸ್ಥಾನ ಹಂಚಿಕೆಯ ಸಂಬಂಧದಲ್ಲಿ ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆ ನನಗಿದೆ ಎಂದವರು ಹೇಳಿದರು.
ಸಚಿವ ಸ್ಥಾನ ನೀಡುವ ಸಂಬಂಧ ನಾನು ಯಾವುದೇ ರೀತಿಯ ಒತ್ತಡ, ಪ್ರಭಾವ ಯಾರ ಮೇಲೂ ಬೀರಲು ಬರುವುದಿಲ್ಲ. ಕೈ ಹೈಕಮಾಂಡ್ ಬಳಿ ಕೇಳೋದಕ್ಕೂ ಆಗುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ಮುಖ್ಯಮಂತ್ರಿಗಳೇ ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದವರು ಹೇಳಿದರು.ಶಾಸಕ ಪ್ರಕಾಶ ಕೋಳಿವಾಡ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ,
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಥಾನ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಹಲವಾಗಲ, ರವೀಂದ್ರಗೌಡ ಪಾಟೀಲ, ಎಸ್ಪಿ ಯಶೋಧಾ ಮಂಟಗೋಡಿ, ಎ ಎಸ್ ಪಿ ಎಲ್ ವೈ ಶಿರಕೋಳ, ಡಿವೈಎಸ್ಪಿ ಜೆ. ಲೋಕೇಶ್, ಸಿಪಿಐ ನಾಗಯ್ಯ ಕಾಡದೇವರ, ಎನ್ ವೆಂಕಟರೆಡ್ಡಿ, ಸಿದ್ದೇಶ್ ಸೇರಿದಂತೆ ಪಿಎಸ್‌ಐ, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 