ಗುಜ್ಜಲ್ ನಾಗರಾಜಗೆ ಟಿಕೆಟ್ ನೀಡಲು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ

ಹೊಸಪೇಟೆ, (ವಿಜಯನಗರ ಜಿಲ್ಲೆ) ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗುಜ್ಜಲ್ ನಾಗರಾಜರವರಿಗೆ ಟಿಕೇಟ್ ನೀಡಲು ಒತ್ತಾಯಿಸಿ ರಸ್ತೆ ತಡೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿದರು. 

ಗುಜ್ಜಲ್ ನಾಗರಾಜರವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ ಸರಿಸುಮಾರು 30 ವರ್ಷಗಳಿಂದ ಪಕ್ಷಕ್ಕೆ ನಿರಂತರವಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ತಳಮಟ್ಟದ ಕಾರ್ಯಕರ್ತರನ್ನು ಸಂಘಟಿಸಿದ್ದಾರೆ. ಸಮಾಜ ಸೇವೆಯಲ್ಲಿ ಅನೇಕ ಸಮಾಜ ಮುಖಿ ಕೆಲಸವನ್ನು ಮಾಡಿದ್ದಾರೆ.  

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತ ಬೆಂಬಲಿತ ಅಭ್ಯರ್ಥಿ ಗುಜ್ಜಲ್ ನಾಗರಾಜ ಇವರಿಗೆ ಟಿಕೇಟ್ ನೀಡಬೇಕು, ಬೇಕೆ ಬೇಕು ಟಿಕೇಟ್ ಬೇಕು, ಕಾರ್ಯಕರ್ತರ ಕೂಗು ಗುಜ್ಜಲ್ ನಾಗರಾಜರವರಿಗೆ ಟಿಕೇಟ್ ನೀಡಬೇಕೆಂದು ಕೂಗುತ್ತಾ, ಪೋಸ್ಟರ್‌ಗಳನ್ನು ಹಿಡಿದು ಜಯಘೋಷಗಳನ್ನು ಹಾಕಿದರು.  

ಹೆಚ್‌.ರಾಘವೇಂದ್ರ, ನಗರಸಭಾ ಸದಸ್ಯರು ಮಾತನಾಡಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವಿಭಜನೆಯಾಗಿರುವುದರಿಂದ ಪಶ್ಚಿಮ ತಾಲೂಕುಗಳ ಅಭಿವೃದ್ಧಿಗಾಗಿ ಮತ್ತು ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಗುಜ್ಜಲ್ ನಾಗರಾಜ್‌ರವರಿಗೆ ನೀಡಬೇಕೆಂದು ಮಾತನಾಡಿದರು. ಇನ್ನೋರ್ವ ಯುವ ಮುಖಂಡರಾದ ಭರತ್ ಕುಮಾರ್‌.ಸಿ.ಆರ್‌.ರವರು ಮಾತನಾಡಿ ಈಗಾಗಲೇ ಶಾಸಕರಾಗಿ ಅಧಿಕಾರವನ್ನು ಅನುಭವಿಸುತ್ತಿರುವವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೇಟ್ ನೀಡುತ್ತಿರುವುದು ಶೋಚನಿಯ ಸಂಗತಿಯಾಗಿದೆ. ಗೆದ್ದರೆ ಸಂಸದರು ಇಲ್ಲವಾದರೆ ಸಚಿವರು ಎರಡೆರಡು ಅವಕಾಶಗಳನ್ನ ಪಕ್ಷ ಒದಗಿಸಿಕೊಟ್ಟರೆ ಉಳಿದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ದೊರೆಯುವುದು ಯಾವಾಗ ಹೀಗಾದರೆ ಈ ಚುನಾವಣೆಯಲ್ಲಿ ಬಿ.ಜೆ.ಪಿಯವರೊಂದಿಗೆ ಅಡ್ಜೆಸ್ಟ್‌ಮೆಂಟ್ (ಹೊಂದಾಣಿಕೆ) ರಾಜಕೀಯವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ವಿವಿಧ ಮಾಧ್ಯಮಗಳಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾರ್ಯಕರ್ತರ ಕೂಗು, ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಗುಜ್ಜಲ್ ನಾಗರಾಜ ರವರಿಗೆ ಟಿಕೇಟ್ ನೀಡಬೇಕೆಂದು ವರಿಷ್ಠರಲ್ಲಿ ಕಾರ್ಯಕರ್ತರ ಕೂಗು ಘಂಟಾಘೋಷವಾಗಿದೆ. ಇಲ್ಲವಾದರೆ ಕಾಂಗ್ರೆಸ್‌ಗೆ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.  

ನಗರಸಭೆ ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಮುಂಚುಣಿ ಘಟಕದ ಅಧ್ಯಕ್ಷರುಗಳು, ತಾರಿಹಳ್ಳಿ ಹನುಮಂತಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ, ಪಿ.ಬಾಬು, ಬಿ.ಮಾರೆಣ್ಣ, ಜಾಫರ್, ಶ್ರೀನಿವಾಸ, ಸೋಮಪ್ಪ, ಲಿಂಗಣ್ಣನಾಯಕ, ನಾಗರಾಜ, ಮಂಜುಳಾ, ಕವಿತಾ ನಾಯಕ, ರಾಧಾನಾಯ್ಡು, ಪ್ರಶಾಂತ್ ನಾಯ್ಕ, ವಾಲ್ಮೀಕಿ, ಜನಾರ್ಧನ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ವಾಲ್ಮೀಕಿ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.