ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಿ : ವಿಜಯ್

ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ  

ಯಲಬುರ್ಗಾ 13: ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ಅಮೂಲ್ಯವಾದ ಜೀವ ರಕ್ಷಿಸಿ ಎಂದು ಪಿಎಸ್‌ಐ ವಿಜಯ್ ಹೇಳಿದರು. 

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ನೀವು ಹೊಂದಿರುವ ವಾಹನಕ್ಕೆ ಸರಿಯಾದ ದಾಖಲೆಗಳನ್ನು ಕಾಪಾಡಿಕೊಳ್ಳಬೇಕು, ಚಾಲಕ ಪರವಾನಗಿ, ಇನ್ಸರೆನ್ಸ್‌, ಪರ್ಮಿಟ್, ಮುಂತಾದ ಅವಶ್ಯಕ ದಾಖಲಾತಿಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬೇಕು. ಹಾಗೂ ಪ್ಯಾಸೆಂಜರ್ ವಾಹನದವರು  ವಾಹನದ ಮೇಲೆ ಪ್ರಯಾಣಿಕರನ್ನು  ಅತಿಯಾಗಿ ಹತ್ತಿಸಿಕೊಂಡು ಸಂಚಾರ ನಿಯಮ ಉಲಂಘನೆ ಮಾಡಬಾರದು. ಮುಖ್ಯ ರಸ್ತೆಯಲ್ಲಿ ವಾಹನಗಳು ಸರಿಯಾಗಿ ಪಾರ್ಕ್‌ ಮಾಡಲು ತಿಳಿಸಿದರು.ಹಾಗೂ ನಿಮ್ಮ ಸುರಕ್ಷತೆಗಾಗಿ ಸರಿಯಾಗಿ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಠಾಣೆಯ ಎ.ಎಸ್‌.ಐ ಪ್ರಕಾಶ, ಸಿಬ್ಬಂದಿಗಳಾದ ಗಂಗಾಧರ ಹಿರೇಮಠ , ಬಸಯ್ಯ, ಲಕ್ಷ್ಮಣ, ಹಾಗೂ ಶಂಕರ್ ನಾಗ್ ಪ್ಯಾಸೆಂಜರ್ ಆಟೋ ಚಾಲಕರ ಸಂಘ, ಮಾರುತೇಶ್ವರ ಸರಕು ಸಾಗಾಣಿಕೆ ಚಾಲಕರ ಮತ್ತು ಮಾಲಕರ ಸಂಘ, ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ಕಾರ್ ಚಾಲಕರ ಸಂಘ, ಹಾಗೂ ವಿಜಯದುರ್ಗಾದೇವಿ ಟೆಂಪೋ ಟ್ರಾವೆಲರ್ಸ್‌ ಸಂಘದ ಸದಸ್ಯರು ಹಾಜರಿದ್ದರು.