ನಿವೃತ್ತ ಅಪರ ಜಿಲ್ಲಾಧಿಕಾರಿ ಬಡಬಡೆ ಇನ್ನಿಲ್ಲ

Retired Additional District Collector Badabade passes away

ಬೆಳಗಾವಿ, 12: ನಿವೃತ್ತ ಅಪರ ಜಿಲ್ಲಾಧಿಕಾರಿ ಎಂ.ಬಿ. ಬಡಬಡೆ (ಮೆಹಬೂಬಸಾಹೇಬ ಬಡಬಡೆ) ನಿನ್ನೆ ರಾತ್ರಿ (ರವಿವಾರ) 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

ಚಿಕ್ಕೋಡಿ ಉಪವಿಭಾಗಾಧಿಕಾರಿಗಳಾಗಿ, ಬೆಳಗಾವಿ ಅಪರ ಜಿಲ್ಲಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಮೃತರು ದಕ್ಷ ಅಧಿಕಾರಿಯಾಗಿದ್ದರು. ಇಂದು ಮಧ್ಯಾಹ್ನ 2 ಗಂಟೆಗೆ ಮೃತರ ಅಂತ್ಯಸಂಸ್ಕಾರ ಬೆಳಗಾವಿಯ ಸ್ಮಶಾನಭೂಮಿಯಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳು, ಸಂಬಂಧಿಕರು ಪಾಲ್ಗೊಂಡು ಅವರಿಗೆ ಅಂತಿಮ ಶ್ರದ್ದಾಂಜಲಿ ಅರ​‍್ಿಸಿದರು. ದಿ. ಎಂ.ಬಿ. ಬಡಬಡೆ ಅವರು  ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳ್ಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.