ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯ ಒದಗಿಸಲು ಮನವಿ

ರಾಣಿಬೆನ್ನೂರು 23:  ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ, ವಿಕಲಚೇತನರು ಸೋಮವಾರ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿ ಕಳೆದ 16 ವರ್ಷಗಳಿಂದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಶೇಕಡ 5ಅ ಅನುದಾನ ಹಾಗೂ ಇತರೆ ಅನುದಾನದಲ್ಲಿ ವಿಶೇಷ ಚೇತನರ ಸಾಮೂಹಿಕ ಕೆಲಸಗಳಿಗೆ ಅನುದಾನ ಬಳಕೆ ಮಾಡಿ ಕಚೇರಿಗಳಲ್ಲಿ ಡಿಜಿಟಲ್ ಮಾಹಿತಿ ನೀಡಲು ಕಂಪ್ಯೂಟರ್ ಮತ್ತು ಪ್ರಿಂಟರ್ ಇತರೆ ಸಲಕರಣೆಗಳನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.  

ರಾಜ್ಯ ಸಮಿತಿ ನಿರ್ದೇಶಕ ಗಣೇಶ ನಂದಿಗಾವಿ, ಅನಸೂಯ ಗಳಗನಾಥ, ಬಸವರಾಜ ತೆಗ್ಗಿಹಳ್ಳಿ, ಕೃಷ್ಣ ಮಡಿವಾಳರ, ಮಂಜುನಾಥ ಚಲವಾದಿ, ಕೊಟ್ರೇಶ ಹಡಪದ, ರವಿ ದೊಡ್ಡಗೌಡ್ರು, ಇಸ್ಮೈಲ್ ಬೆನಕನಕೊಂಡ, ರತ್ನ ಚಳಗೇರಿ ಹಾಜರಿದ್ದರು 

ಫೋಟೊ:23ಆರ್‌ಎನ್‌ಆರ್01ರಾಣಿಬೆನ್ನೂರ:ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ, ವಿಕಲಚೇತನರು ಸೋಮವಾರ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.