ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ಅಂಚೆ ಕಚೇರಿ ಶಾಖೆಗೆ ಮನವಿ
Request for a post office branch at Tipu Sultan Circle
ಲೋಕದರ್ಶನ ವರದಿ
ಜಮಖಂಡಿ 30 : ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಮಾರ್ಗದ ದಾನಮ್ಮ ದೇವಿ ಗುಡಿ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಅಂಚೆ ಕಚೇರಿ ಉಪಶಾಖೆ ಆರಂಭಿಸಬೇಕು ಎಂದು ಎಐಎಂಐಎಂ ಸಂಘಟನೆ ವತಿಯಿಂದ ಮುಖ್ಯ ಅಂಚೆ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಟಿಪ್ಪು ಸುಲ್ತಾನ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಹಿರಿಯ ನಾಗರಿಕರು, ವಿಧವಾ ಹಾಗೂ ವೃದ್ಧಾಪ್ಯ ಪಿಂಚಣಿದಾರರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಅಂಚೆ ಇಲಾಖೆಯ ಸೇವೆಗಳನ್ನು ಅವಲಂಬಿಸಿದ್ದಾರೆ. ಆದರೆ ಸಮೀಪದಲ್ಲಿ ಅಂಚೆ ಕಚೇರಿ ಇಲ್ಲದ ಕಾರಣ ಸಾರ್ವಜನಿಕರು 1ರಿಂದ 2-3 ಕಿ.ಮೀ. ದೂರದಲ್ಲಿರುವ ಅಂಚೆ ಕಚೇರಿಗೆ ತೆರಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದಾನಮ್ಮ ದೇವಿ ಗುಡಿ ಸಮೀಪ ಹೊಸ ಅಂಚೆ ಕಚೇರಿ ಶಾಖೆ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಎಐಎಂಐಎಂ ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಮಾದಾರ, ಉಪಾಧ್ಯಕ್ಷ ಯಾಸೀನ್ ಲೋದಿ, ಮೌಲಾನಾ ಶೇಖ್, ಅಬ್ದುಲ್ ನೈಕೋಡಿ, ವಶೀಂ ಹವಾಲ್ದಾರ್, ಮುಸ್ತಾಕ್ ತೇರದಾಳ, ಸಾಧಿಕ್ ಪೆಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 