ಆಯುಧ ಪರವಾನಿಗೆ ನವೀಕರಿಸಿಕೊಳ್ಳಿ : ಜಿಲ್ಲಾಧಿಕಾರಿ ಸೂಚನೆ
Renew your weapon license: District Collector's instructions
ಆಯುಧ ಪರವಾನಿಗೆ ನವೀಕರಿಸಿಕೊಳ್ಳಿ : ಜಿಲ್ಲಾಧಿಕಾರಿ ಸೂಚನೆ
ಕಾರವಾರ 15 : ಸ್ವಯಂ ರಕ್ಷಣೆ , ಬೆಳೆ ರಕ್ಷಣೆಗೆ ಆಯುಧ ಇಟ್ಟು ಕೊಂಡವರು ಪರವಾನಿಗೆ ನವೀಕರಣ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಆಯುಧ ಹೊಂದಿದವರಿಗೆ ಸೂಚಿಸಿದ್ದಾರೆ. ಆಯುಧ ನಿಯಮಾವಳಿಗಳಂತೆ ಆಯುಧ ಬಳಕೆ ಪರವಾನಿಗೆ ಮುಕ್ತಾಯಗೊಳ್ಳುವ ಕನಿಷ್ಠ 60 ದಿನಗಳೊಳಗಾಗಿ ನವೀಕರಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ. ಡಿಸೆಂಬರ್ 31 ರಂದು ನವೀಕರಣ ಅವಧಿ ಮುಕ್ತಾಯಗೊಳ್ಳಲಿರುವ ಅನುಜ್ಞಪ್ತಿದಾರರು ಮೂಲ ಆಯುದ ಅನುಜ್ಞಪ್ತಿ, ನಮೂನೆ 0-3 ಯಲ್ಲಿ ಅರ್ಜಿ, ನಮೂನೆ ಎಸ್-3 ಯಲ್ಲಿ ವೈದ್ಯಕೀಯ ಪ್ರಮಾಣ ಪತ್ರ. ನಮೂನೆ ಎಸ್-4 ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದ ನಿರಾಕ್ಷೇಪಣಾ ಪತ್ರ., 5 ವರ್ಷಗಳ ಅವಧಿಗೆ ನವೀಕರಣ ಶುಲ್ಕ ರೂ.2.500 ನ್ನು ಏ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ ಲೆಕ್ಕ ಶೀರ್ಷಿಕೆ ಸಂಖ್ಯೆ 00-55-00-104-000-000 ನೇದಕ್ಕೆ ಭರಣ ಮಾಡಿದ ಮೂಲ ಚಲನ್, ಹಿಡುವಳಿ ಪ್ರಮಾಣ ಪತ್ರ. ದಾಖಲೆಗಳೊಂದಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ ಸ್ವ ರಕ್ಷಣೆ ಆಯುಧ ಅನುಜ್ಞಪ್ತಿದಾರರು ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು ಹೊರತುಪಡಿಸಿ ಮೇಲಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 