ಕನ್ನಡ ಸಾಹಿತ್ಯ ಸಮೇಳನದ ಲಾಂಚನ ಬಿಡುಗಡೆ

ಜಮಖಂಡಿ 29: 17 ಮಾ, 2024 ರಂದು 9 ನೇ ಕನ್ನಡ ಸಾಹಿತ್ಯ ಸಮೇಳನ ನಗರದ ಬಸವ ಭವನದಲ್ಲಿ ನಡೆಯಲ್ಲಿದ್ದು. ಬೆಳಗೆ 9 ಗಂಟೆಗೆ ಹಳೆ ತಹಶೀಲ್ದಾರ ಕಚೇರಿಯಿಂದ ಮೆರವಣೆಗೆ ಪ್ರಾರಂಭಗೊಂಡು ಬಸವ ಭವನ ತಲುಪುವದು. ಕಾರ್ಯಕ್ರಮದಲ್ಲಿ ಮೂರು ಸಾವಿರ ಅಧಿಕ ಜನರು ಸೇರಲಿದ್ದು. ಕನ್ನಡ ಶ್ರೀ ಪ್ರಶಸ್ತಿ, ಸನ್ಮಾನಗಳು, ಅಕ್ಷರ ಜಾತ್ರೆ ಮಳಿಗೆಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆಂದು ಕನ್ನಡ ಸಾಹಿತ್ಯ ಸಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಶಾಸಕರ ಗೃಹ ಕಚೇರಿ ಸಾಕ್ಷಾತ್ಕಾರ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಸಮೇಳನದ ಲಾಂಚನ ಬಿಡುಗೊಳಿಸಿ ಮಾತನಾಡಿದ ಅವರು, ರುದ್ರಾವಧೂತ ಮಠದ ಶ್ರೀ ಸಹಜಾನಂದ ಅವಧೂತರನ್ನು ಸಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.  

ಕನ್ನಡ ಸಾಹಿತ್ಯ ಸಮೇಳನ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, 17 ರಂದು ಸರ್ವಾಧ್ಯಕ್ಷ ಸಮೇಳನ ಅಧ್ಯಕ್ಷ ಸಹಜಾನಂದ ಅವಧೂತರು. ಕನ್ನಡ ನಾಡು, ನೆಲ, ಜಲ ಬಗ್ಗೆ ಸೇವೆಗೈದ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಶಾಸ್ತ್ರಗಳನ್ನು ಅಧ್ಯಯನ ಮಾಡಿ. ಮೂರು ನೂರು ಅಧಿಕ ಮಠಾಧೀಶರಾಗುವ ಸ್ವಾಮೀಜಿಗಳಿಗೆ ವಿದ್ಯಾಭ್ಯಾಸವನ್ನು ನೀಡಿ. ಮಠಾಧೀಶರನ್ನಾಗಿ ತಯಾರಿಸುವ ಮೂಲಕ ಸಮಾಜದ ಸೇವೆ ಮಾಡುತ್ತಿದ್ದು. ಕಡುಬಡತನ ಸಮಾಜವನ್ನು ಉದ್ದರಿಸಿ. ಸಾಕಷ್ಟು ವೇದಾಂತ, ಉಪನಿಷತುಗಳ ಪುಸ್ತಕಗಳನ್ನು ಬರೆದಿದ್ದಾರೆ.ಹೀಗಾಗಿ ಅವನ್ನು ಸಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು. ಕಾ.ಅಧ್ಯಕ್ಷ ಜಿ.ಎಸ್‌.ನ್ಯಾಮಗೌಡ, ಕೋಶಾಧ್ಯಕ್ಷ ಉಮೇಶ ಮಹಾಬಳಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. 

ಬೆಳಗೆ 9 ಗಂಟೆಗೆ ಹಳೇ ತಹಶೀಲ್ದಾರ ಕಚೇರಿಯಿಂದ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು. 10,30 ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು. ಗೋಷ್ಠಿಗಳು ಜರುತ್ತವೆ. 10 ಜನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವದು. ಸಾಹಿತಿಗಳು ಬರೆದ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವದು. ಮತ್ತೆ ಯಾರಾದರೂ ಪುಸ್ತಕಗಳನ್ನು ಬರೆದಿದ್ದರೆ ಅಂತವರ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಾಗುವದು. ಜೀವಮಾನ ಪ್ರಶಸ್ತಿ ನೀಡಲಾಗುತ್ತದೆ.ಅಕ್ಷರ ಜಾತ್ರೆ ಮಾಡುವ ಮೂಲಕ ಪುಸ್ತಕ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು. 

ಪ್ರೋ,ಬಸವರಾಜ ಕಡ್ಡಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಾಹಿತಿ ಸಂಗಮೇಶ ಮಟ್ಟೋಳಿ, ರುದ್ರಗೌಡ ಪಾಟೀಲ, ವಿನೋದ ಲೋಣಿ ಸೇರಿದಂತೆ ಕಸಪಾ ಸದ್ಯಸರು ಉಪಸ್ಥಿತರಿದರು.