ಅಪಹೃತ ಭಾರತೀಯರಿಬ್ಬರ ಬಿಡುಗಡೆ: ಸುಶ್ಮಾ ಸ್ವರಾಜ್
ಹೊಸದಿಲ್ಲಿ : ವಾಣಿಜ್ಯ ಭೇಟಿಗಾಗಿ ಮಲೇಶ್ಯಕ್ಕೆ ತೆರಳಿದ್ದ ವೇಳೆ ಅಪಹೃತರಾಗಿದ್ದ ಇಬ್ಬರು ಭಾರತೀಯರನ್ನು ಪಾರುಗೊಳಿಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ದೃಡೀಕರಿಸಿದ್ದಾರೆ.
ವಾಣಿಜ್ಯ ಪ್ರವಾಸಾರ್ಥ ಮಲೇಶ್ಯಕ್ಕೆ ತೆರಳಿದ್ದ ಆರ್ ವಿ ವೈದ್ಯ ಮತ್ತು ಕೆ ಪಿ ವೈದ್ಯ ಅವರನ್ನು ಇದೇ ಆಗಸ್ಟ್ 3ರಂದು ಅಪಹರಿಸಲಾಗಿತ್ತು.
ಮಲೇಶ್ಯದಲ್ಲಿನ ಭಾರತೀಯ ಹೈಕಮಿಶನರ್ ಮೃದುಲ್ ಕುಮಾರ್ ಮತ್ತು ಅವರ ತಂಡದವರು, ಮಲೇಶ್ಯ ಪೊಲೀಸರು ನಡೆಸಿರುವ ಪ್ರಯತ್ನದ ಫಲವಾಗಿ ಇಬ್ಬರೂ ಭಾರತೀಯ ಪ್ರಜೆಗಳನ್ನು ಪಾರುಗೊಳಿಸಲಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ ಎಂಬುದಾಗಿ ಸುಶ್ಮಾ ಸ್ವರಾಜ್ ಟ್ವಿಟರ್ನಲ್ಲಿ ಹೇಳಿದ್ದಾರೆ.
ಇದೇ ವೇಳೆ ಎಂ ವಿ ಮಹಷರ್ಿ ವಾಮದೇವ ಹಡಗಿನ ಸಿಬಂದಿಗಳಾದ ರೋಹಿತ್ ಪಾಲ್ ಮತ್ತು ರಿಷಬ್ ಗುಪ್ತಾ ಅವರು ಹಡಗಿನಲ್ಲಿ ಎಸಿ ಮತ್ತು ಬೆಳಕು ಇಲ್ಲದಿದ್ದ ಕಾರಣಕ್ಕೆ ಹೀಟ್ ಸ್ಟ್ರೋಕ್ ಗೆ ಗುರಿಯಾಗಿದ್ದು ಅವರನ್ನು ಮರಳಿ ದೇಶಕ್ಕೆ ಕರೆ ತರಲಾಗಿದೆ ಎಂದು ಸಚಿವೆ ಸುಶ್ಮಾ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 