ನಿತ್ಯ ಯೋಗ ಧ್ಯಾನ ಪ್ರಾಣಯಾಮದಿಂದ ರೋಗ ದೂರ- ಪರ್ವೀನ್ ಯಲವಿಗಿ
Regular yoga, meditation and pranayama keep diseases away - Parveen Yalavigi
ರಾಣೆಬೆನ್ನೂರು 25 : ಜಿಲ್ಲಾ ಕೇಂದ್ರ ಹಾವೇರಿ ವಿನಾಯಕ ನಗರದ ನಾಗರಿಕ ವೇದಿಕೆಯ ಮಹಿಳಾ ಘಟಕವು, ತನ್ನ ಸಾಮಾಜಿಕ ಕಳಕಳಿಯೊಂದಿಗೆ ಇಲ್ಲಿನ ಉದ್ಯಾನವನದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.
ಯೋಗಾಸನ ಮತ್ತು ಯೋಗದಿಂದಾಗುವ ಆರೋಗ್ಯ ಪರಿಣಾಮಗಳು ಕುರಿತಂತೆ ಮಾತನಾಡಿದ ಯೋಗ ಸಾಧಕಿ ಶ್ರೀಮತಿ ಪರ್ವೀನ್ ಯಲವಿಗಿ ಅವರು, ಆಧುನಿಕ ಜೀವನ ಶೈಲಿ ನಮ್ಮ ದಿನ ನಿತ್ಯದ ಬದುಕಿನಲ್ಲಿ ಅನೇಕ ರೀತಿಯ ರೋಗರುಜನೆಗಳಿಗೆ ಬಲಿಯಾಗುವಂತಾಗಿದೆ.
ನಮ್ಮ ಪೂರ್ವಜರು, ಋಷಿಮುನಿಗಳು ಅನುಸರಿಸಿಕೊಂಡು ಬಂದಿರುವ ಯೋಗ, ಧ್ಯಾನ, ಪ್ರಾಣಯಾಮ ನಿತ್ಯವೋ ಅರ್ಧ ತಾಸುಗಳ ಕಾಲ ಸಮಯ ಮೀಸಲಿಟ್ಟು ಅಳವಡಿಸಿಕೊಂಡರೆ ನಾವು ಸದಾಕಾಲ ನಿರೋಗಿಗಳಾಗಿ ಬದುಕಬಹುದಾಗಿದೆ ಎಂದರು.
ಮಹಿಳಾ ಘಟಕದ ಹಿರಿಯ ಸದಸ್ಯರಾದ ಶಾಂತಕ್ಕ ಉಳ್ಳಾಗಡ್ಡಿ ಅವರು ಮಾತನಾಡಿ, ದಿನಾಚರಣೆ ಕೇವಲ ಒಂದು ದಿನಕ್ಕೆ ಮೀಸಲಾಗದೆ, ನಿತ್ಯ ಜೀವನ ಬದುಕಿನ ಜೊತೆಗೆ ಹವ್ಯಾಸವಾಗಿ ಅಳವಡಿಸಿಕೊಂಡರೆ, ಸದಾಕಾಲ ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ ಸ್ವಾಸ್ಥ ಸಮಾಜಕ್ಕಾಗಿ ನಾವೆಲ್ಲ ಮಹಿಳೆಯರು ಇಂದು ಯೋಗ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸದಸ್ಯರಾದ ರತ್ನಾ ನಾಯಕ, ಭಾರತಿ ಶೆಟ್ಟರ, ಅಕ್ಕಮ್ಮ ಸಾವಿತ್ರಮ್ಮ, ಹೇಜೀಬ, ಮಹಾದೇವಕ್ಕ, ಶಿಲ್ಪಾ, ಸುಮಿತ್ರಾ ಲಕ್ಷ್ಮಿ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 