ಕರವೇದಿಂದ ತಾಲೂಕಾ ಪದಾಧಿಕಾರಿಗಳ ನೇಮಕ


ಹುನಗುಂದ29:  ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ)ಬಣದ ಹುನಗುಂದ ತಾಲೂಕ ನೂತನ ಅಧ್ಯಕ್ಷರನ್ನಾಗಿ ಶರಣು ಅಂದಪ್ಪ ಗಾಣಗೇರ ಅವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರಗೆ ಮತ್ತು ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರವೇ (ಶಿವರಾಮೇಗೌಡ್ರ) ಬಣದ ಜಿಲ್ಲಾಧ್ಯಕ್ಷ ಬಸನಗೌಡ ಎಂ ಪಾಟೀಲ ತಿಳಿಸಿದರು.        

 ಇಲ್ಲಿನ ಪ್ರವಾಸಿ ಮಂದಿರ ನಡೆದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ) ಬಣದ ತಾಲೂಕಾ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಕನ್ನಡ ನಾಡು ನುಡಿ,ಜಲ,ಗಡಿ,ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಕರವೇ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿ ಅದನ್ನು ತಡೆಯುವ ಮೂಲಕ ಜಯವನ್ನು ಪಡೆದುಕೊಂಡಿದೆ. ಅದರಂತೆ ಹುನಗುಂದ ತಾಲೂಕಿನಾಧ್ಯಂತ ಸಂಘಟನೆಯನ್ನು ಬಲಪಡಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ದಕ್ಕೆಯಾದಾಗ ಅದರ ವಿರುದ್ಧ ಕರವೇ ತಾಲೂಕ ಘಟಕ ಹೋರಾಟ ಮಾಡಬೇಕು. ಯಾವದೇ ವೈಷಮ್ಯವನ್ನು ತಂದು ಸಂಘಟನೆಯ ಹಿತದೃಷ್ಠಿಗೆ ದಕ್ಕೆಯನ್ನು ತರಬಾರದು ಮತ್ತು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳದೇ ತಮ್ಮ ಜವಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳದೇ ಸಂಘಟನೆಯ ಏಳ್ಗೆಗಾಗಿ ಶ್ರಮಿಸಬೇಕು. ನೊಂದವರ ಧ್ವನಿಯಾಗಿ ತಾಲೂಕಿನಾಧ್ಯಂತ ಹೋರಾಟ ಮಾಡಲು ಮುಂದಾಗಬೇಕೆಂದು ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಕಿವಿಮಾತನ್ನು ಹೇಳಿದರು.                                                                                  ನೂತನ ಅಧ್ಯಕ್ಷ ಶರಣು ಗಾಣಿಗೇರ ಮತ್ತು ಉಳಿದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡುವುದರ ಜೊತಗೆ ಪ್ರತಿಜ್ಞೆ ವಿಧಿಯನ್ನು ಜಿಲ್ಲಾಧ್ಯಕ್ಷರು ಬೋಧಿಸಿದರು.                                                                        ಕರವೇ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಪ್ರಶಾಂತ ಭಾವಿಕಟ್ಟಿ,ಕಾರ್ಮಿಕ ಘಟಕದ ಕಾರ್ಯಾಧ್ಯಕ್ಷ ಸಿದ್ರಾಮೇಶ್ವರ ಹಾಸನ, ನಗರ ಘಟಕದ ಅಧ್ಯಕ್ಷ ಶಂಕರ ಮುತ್ತಲಗೇರಿ, ಉಪಾಧ್ಯಕ್ಷ ಸಂತೋಷ ಚಿನಿವಾಲ, ಹುನಗುಂದ ಘಟಕದ ಪದಾಧಿಕಾರಿಗಳಾದ ಸಿದ್ದು ಮೂಲಿನಮನಿ, ತಮ್ಮಣ್ಣ ಸೂಡಿ, ಬಾಬು ವಾಲೀಕಾರ, ಮಹಾಂತೇಶ ತಾರಿವಾಳ, ಹುಸೇನಸಾಬ ನದಾಫ್, ವೀರಭದ್ರಯ್ಯ ಹಿರೇಮಠ, ಇಸ್ಮಾಯಿಲ್ ಅತ್ತಾರ, ಮುತ್ತಣ್ಣ ಕಲ್ಮಡಿ, ಸಂಗಣ್ಣ ನೇಗಲಿ ಸೇರಿದಂತೆ ಅನೇಕರು ಇದ್ದರು.