ಶಾಸನದ ಓದು : ಪ್ರಾಯೋಗಿಕ ತರಬೇತಿ

ಧಾರವಾಡ, 30: ದೇಶದ ಸಂಸ್ಕೃತಿಯನ್ನು ತಿಳಿಸಿಕೊಡುವ ದಾಖಲೆಗಳನ್ನು ಶಾಸನಗಳು ಒದಗಿಸಿಕೊಡುತ್ತವೆ. ಎಲ್ಲ ಶಾಸ್ತ್ರಗಳಿಗೆ ತಾಯಿಯೇ ಇತಿಹಾಸ. ಶಾಸನಗಳಲ್ಲಿ ಅನೇಕ ವಿಧಗಳಿರುವುದನ್ನು ಕಾಣುತ್ತೇವೆ. ಶಾಸನಗಳು ಪ್ರಾಮಾಣಿಕ ಮಹತ್ವವನ್ನು ಸಾರುವ ದಾಖಲೆಗಳಾಗಿವೆ. ಎಂದು ಪ್ರೊ. ಮೇಲ್ಕರ ಹೇಳಿದರು. ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ಜನತಾ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ದೃಶ್ಯಕಲಾ ಆಕ್ಯಾಡೆಮಿಯ ಸಹಯೋಗದಲ್ಲಿ ಜೆ.ಎಸ್‌.ಎಸ್‌. ಉತ್ಸವ ಸಭಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಶಾಸನ ಶಾಹಿತ್ಯ ಪರಿಷತ್ತಿನ ಮೊದಲ ಮಹಾಅಧೀವೇಶನದಲ್ಲಿ ‘ಶಾಸನದ ಓದು’ ತರಬೇತಿ ಎಂಬ ವಿಷಯ ಕುರಿತು ಮಾತನಾಡಿದರು. ಇದೇ ಸಂಧರ್ಭದಲ್ಲಿ ಪ್ರೊ. ಎಸ್‌.ಸಿ. ಹಿರೇಮಠ ಅವರು ಶಾಸನಗಳನ್ನು ಯಾವ ರೀತಿಯಲ್ಲಿ ಓದಬೇಕು. ಹೇಗೆ ಆ ಶಾಸನದ ಪಠ್ಯವನ್ನು ಪೇಪರ್ ಮೇಲೆ ಸೆರೆಹಿಡಿಯಬೇಕು. ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ವೇದಿಕೇಯ ಮೇಲೆ ಡಾ. ಆರ್‌.ವ್ಹಿ. ಚಿಟಗುಪ್ಪಿ ಡಾ. ಲಕ್ಷ್ಮಣ ತೆಲಗಾವಿ, ಡಾ.ಜಿನದತ್ತ ಹಡಗಲಿ ಅವರು ಇದ್ದರು. ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗ ಪಡಿಸಿಕೊಂಡರು.