ಓದು-ಬರಹ ವಿದ್ಯಾರ್ಥಿ ಬದುಕಿನ ಎರಡು ಕಣ್ಣಿದ್ದಂತೆ: ಸಂತೋಷ ಬಂಡೆ
Reading and writing are like the two eyes of a student's life: Santosh Bande
ಲೋಕದರ್ಶನ ವರದಿ
ಇಂಡಿ 26 : ಓದು-ಬರಹ ವಿದ್ಯಾರ್ಥಿ ಬದುಕಿನ ಎರಡು ಕಣ್ಣಿದ್ದಂತೆ. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿ, ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣ ರೂಢಿಸಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು. ಇಂಡಿ ತಾಲೂಕಿನ ಮಾರ್ಸನಳ್ಳಿ ಗ್ರಾಮದ ವಿದ್ಯಾರಣ್ಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ಕಲಿಕಾ ಪುನಶ್ಚೇತನ ಕಾರ್ಯಾಗಾರ ಹಾಗೂ ಪಾಲಕರ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮುಖ್ಯ. ಮಕ್ಕಳಲ್ಲಿ ಸಕಾರಾತ್ಮಕ ಯೋಚನೆ ಜಾಗೃತವಾಗಬೇಕು. ಸದೃಢ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಬಹುಮುಖ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ಓದುವ, ಬರೆಯುವ, ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ, ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು’ ಎಂದು ಹೇಳಿದರು. ಶಾಲಾ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡ್ಡಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಕುಟುಂಬ, ಸಮಾಜ, ದೇಶದ ಆಸ್ತಿಯಾಗುವಂತೆ ಪಾಲಕರು, ಶಿಕ್ಷಕರು ಶ್ರಮಿಸಬೇಕು.
ಮಕ್ಕಳು ಪರಿಶ್ರಮ, ಪ್ರಾಮಾಣಿಕತೆ, ವಿನಯದ ಗುಣ ಮೈಗೂಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.ಶಾಲೆಯ ಅಧ್ಯಕ್ಷ ಮಹಾದೇವ ಗುಡ್ಡಳ್ಳಿ,ಶಿಕ್ಷಕಿ ಅಂಬಿಕಾ ಗುಡ್ಡಳ್ಳಿ, ಪಾಲಕರಾದ ನಿಂಗನಗೌಡ ಬಿರಾದಾರ, ಚಂದು ಪೂಜಾರಿ,ಅಶೋಕ ಮಿರಗಿ,ಇಸ್ಮಾಯಿಲ್ ವಾಲೀಕಾರ ಸೇರಿದಂತೆ ಅನೇಕ ಪಾಲಕರು, ತಾಯಂದಿರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಉಮಾಶ್ರೀ ತೆಗ್ಗಳ್ಳಿ ನಿರೂಪಿಸಿದರು. ಆರ್ತಿ ಕೇರಳ ವಂದಿಸಿದರು.ಕೋಟ್:1)ವಿದ್ಯಾರ್ಥಿ ಬದುಕಿನಲ್ಲಿ ಸಾತ್ವಿಕ ಗುಣ ಬಹಳ ಮುಖ್ಯ. ಇದು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ, ಉಜ್ವಲ ಭವಿಷ್ಯಕ್ಕೆ ಬುನಾದಿಯಾಗುತ್ತದೆ.*ಸಂತೋಷ ಬಂಡೆಶಿಕ್ಷಕ, ಹಿರೇರೂಗಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 