ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
Rati Kaman's wedding brings joy to Holi festival: hundreds of people bow down at the wedding
ಪಾರೇಶ ಭೋಸಲೆ
ಬೆಳಗಾವಿ : ಭಾರತೀಯ ಸಂಸ್ಕೃತಿಯ ಪರಂಪರೆಗಳು ಹಾಗೂ ಹಬ್ಬಗಳು ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಹೋಳಿ ಹಬ್ಬದ ದಿನದಂದು ರತಿ ಕಾಮನನ್ನ ಮದುವೆ ಮಾಡಿಸುವ ಮೂಲಕ ನೂರಾರು ಜನರು ಬಾಸಿಂಗ್ ತರಲು ಬಾಜಾಭಜಂತ್ರಿ ಹಚ್ವಿ ಮೆರವಣಿಗೆಯುದ್ದಕ್ಕು ಕುಣಿದು ಕುಪ್ಪಳಿಸಿ ಅಕ್ಷತಾರೋಪನ ಮಾಡಿ ಮದುವೆ ಮಾಡಿಸುವ ಪದ್ದತಿಯು ಹಲವಾರು ವರ್ಷಗಳಿಂದ ನಡೆದ ಬಂದಿದ್ದು, ಇಂತಹದೊಂದು ಸನ್ನಿವೇಶಕ್ಕೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟವು ಸಾಕ್ಷಿಯಾಗಿದೆ.

ಹೌದು ಇಂತದೊಂದು ಆಚರಣೆಯು ಹುಕ್ಕೇರಿ ತಾಲೂಕಿನ ಸಂಕೇಶ್ವರದ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಹೋಳಿ ಸುಡುವ ದಿನದಂದು ಸಂಕೇಶ್ವರದ ಹೊಸಪೇಟೆ ಬಸವನ ಬೀದಿ (ಗಲ್ಲಿ) ಯಲ್ಲಿ ಇರುವ ಬಸವ ಮಂದಿರದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ರತಿದೇವಿ ಹಾಗೂ ಕಾಮನ್ನರ ಮದುವೆ ಕಾರ್ಯಕ್ರಮವನ್ನು ಅತಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.

ಧಾರವಾಡ ಬಿಟ್ಟರೆ ಸಂಕೇಶ್ವರದ ಹೊಸಪೇಟೆ ಬಸವೇಶ್ವರ ದೇವಸ್ಥಾನ ಬಸವನ ಬೀದಿಯಲ್ಲಿ ಹಲವು ವರ್ಷಗಳಿಂದ ರತಿ ಕಾಮನ್ ಅವರ ಮದುವೆ ಆಚರಣೆ ಮಾಡುತ್ತ ಬಂದಿರುತ್ತಾರೆ. ಹೋಳಿ ಹುಣ್ಣಿಮೆಯ ದಿನ ಬೆಳಿಗ್ಗೆ ಪೂಜೆ ನಡೆಯುತ್ತದೆ. ಬಳಿಕ ಸಂಜೆ ಅರಸಿನ ಕಾರ್ಯಕ್ರಮ ನಡೆಯುತ್ತದೆ. ಅದೇ ರೀತಿ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಸಿಂಗ್ ತರುವ ಸಂಪ್ರದಾಯ ಇದೆ.

ಮೆರವಣಿಗೆಯು ಬಳಿಕ ಬಸವನ ಗಲ್ಲಿಗೆ ಆಗಮಿಸಿ ಅಕ್ಷಯ ಹಿರೇಮಠ ಅವರು ಮದುವೆ ಮಂತ್ರದೊಂದಿಗೆ ರತಿ ಕಾಮನ್ನರಿಗೆ ಬಾಸಿಂಗ್ ಕಟ್ಟುವ ಮೂಲಕ ಅಕ್ಷತಾರೋಪನ ಕಾರ್ಯಕ್ರಮ ನೆರವೆರಿಸಲಾಗುತ್ತದೆ. ಬಳಿಕ ಅಲ್ಲಿ ಮಾಡಲಾದ ಮಹಾಪ್ರಸಾದವನ್ನು ಎಲ್ಲರು ಸ್ವೀಕರಿಸುತ್ತಾರೆ. ಈ ವೇಳೆ ಉದ್ಯಮಿ ಆನಂದ ಶಿರಕೋಳಿ ದಂಪತಿಗಳಿಂದ ರತಿ ಕಾಮನ್ನರ ಪೂಜೆ ಬಳಿಕ ಅರಸಿನ ಹಚ್ವುವದರೊಂದಿಗೆ ರತಿ ಕಾಮನನ್ನ ಮದುವೆಗೆ ಚಾಲನೆ ನೀಡಿದರು.
ಈ ವೇಳೆ ಸಂಜಯ ಶಿರಕೋಳಿ, ಬಸವರಾಜ ಬಾಗಲಕೋಟೆ, ಮಹಾಂತೇಶ ಕಮತಗಿ, ಸುನಿಲ ಪರ್ವತರಾವ್ ಶಿವಾನಂದ ಮುಡಸಿ, ರೋಹನ ನೇಸರಿ, ಆನಂದ ಸಂಸುದ್ದಿ, ಚಿದು ಕರ್ದನ್ನವರ, ಕುಮಾರ ಕಬ್ಬೂರಿ, ಅಜಯ ಜರಳಿ, ಗೀರೀಶ ಗಡ್ಡಿ, ನಿಖಿಲ್ ಶಿರಕೋಳಿ, ಉಮೇಶ ಫಡಿ, ವಿಜಯ ಜರಳಿ ಸೇರಿದಂತೆ ನೂರಾರು ಜನರು ಈ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 