ರಣವೀರ್, ದೀಪಿಕಾಗೆ ನೀಡಿದ ಭರವಸೆ ಇನ್ನೂ ಈಡೇರಿಸಲಿಲ್ಲ

ಮುಂಬೈ, ಮೇ 26,ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆ ಅವರ ವಿವಾಹದ ಸಮಯದಲ್ಲಿ ಒಂದು ಭರವಸೆ ನೀಡಿದ್ದರು,  ಅದು ಇನ್ನೂ ಈಡೇರಿಲ್ಲ ಎಂದು ಹೇಳಿದ್ದಾರೆ.
ರಣವೀರ್ ಸಿಂಗ್ ಅವರನ್ನು ಕಾಳಜಿಯುಳ್ಳ ಪತಿ ಎಂದು ಪರಿಗಣಿಸಲಾಗಿದೆ. ದೀಪಿಕಾಗೆ ಮದುವೆಯ ಪೂರ್ವದಲ್ಲಿ ನೀಡಿದ್ದ ಮಾತನ್ನು ಈಡೇರಿಸಿಲ್ಲ ಎಂದು ರಣವೀರ್ ಇತ್ತೀಚೆಗೆ ಹೇಳಿದ್ದಾರೆ. ಇನ್ ಸ್ಟಾಗ್ರಾಮ್ ಚಾಟ್ ನಲ್ಲಿ ರಣವೀರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ನಾನು ದೀಪಿಕಾ ಮತ್ತು ಅವರ ಕುಟುಂಬವನ್ನು ಮೆಚ್ಚಿಸಲು ತುಂಬಾ ಉತ್ತಮವಾದ ಮಟರ್ ಚಿಕನ್ ತಯಾರಿಸುತ್ತೇನೆ ಎಂದು ಹೇಳುತ್ತಿದ್ದೆ. ನಾನು ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಇಡೀ ನಗರದಲ್ಲಿ ನಾನು ಅತ್ಯುತ್ತಮ ಮಟರ್ ಚಿಕನ್ ತಯಾರಿಸುತ್ತಿದ್ದೆ. ಭಾರತ ಮಾತ್ರವಲ್ಲ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜನರು ಕೂಡ ನನ್ನ ಅಡುಗೆಯ ಸವಿ ಸವಿಯಲು ಬರುತ್ತಿದ್ದರು” ಎಂದು ತಿಳಿಸಿದ್ದೆ.
ರಣವೀರ್ ತಮ್ಮ ಕೈಯಾರೆ ಮಾಡಿದ ಮಟರ್ ಚಿಕನ್ ಅನ್ನು ದೀಪಿಕಾ ಮತ್ತು ಅವಳ ಕುಟುಂಬಕ್ಕೆ ಕೊಡುವ ಭರವಸೆಯನ್ನು ಈಡೇರಿಸಲಿಲ್ಲ. "ಅವರ ಕುಟುಂಬಕ್ಕೆ ನಾನು ಚಿಕನ್ ನೀಡಿದ್ದೇನೆ ಆದರೆ ಅದರಲ್ಲಿ ಮೋಸ ಮಾಡಿದೆ" ಎಂದು ಅವರು ಹೇಳಿದರು. “ರೆಡಿಮೇಡ್ ಮಿಶ್ರಣಗಳನ್ನು ಸೇರಿಸುವ ಮೂಲಕ ನಾನು ಅದನ್ನು ತಯಾರಿಸಿದೆ. ನೀವು ರೆಡಿಮೇಡ್ ಪ್ಯಾಕೆಟ್ ಅನ್ನು ಬಳಸಿದರೆ ಯಾರೂ ಗಮನ ಕೊಡುವುದಿಲ್ಲ ಎಂದು ನಾನು ಭಾವಿಸಿದೆವು, ಆಗ ನನಗೆ ಬೇರೆ ದಾರಿ ಇರಲಿಲ್ಲ ಏಕೆಂದರೆ ಮೊಟ್ಟೆ ಮಾಡುವುದನ್ನು ಬಿಟ್ಟು ಬೇರೆ ಅಡುಗೆ ನಾನು ಅರಿಯೆ” ಎಂದಿದ್ದಾರೆ.
ದೀಪಿಕಾ ಅಡುಗೆಯನ್ನು ಮಾಡುವುದನ್ನು ಇಷ್ಟಪಡುತ್ತಾರೆ ಎಂದು ರಣವೀರ್ ಹೇಳಿದರು. "ದೀಪಿಕಾ ಅಡುಗೆಯ ಬಗ್ಗೆ ಒಲವು ಹೊಂದಿದ್ದಾಳೆ ಮತ್ತು ಈ ಕೆಲಸದಲ್ಲಿ ಅವಳು ನನಗಿಂತ ಉತ್ತಮ. ಹಾಗಾಗಿ ಅಡುಗೆಮನೆಯಲ್ಲಿ ಅವರಿಗೆ ಸಹಾಯ ಮಾಡುತ್ತೇನೆ. ಲಾಕ್ ಡೌನ್ ಅವಧಿಯಲ್ಲಿ ಅವಳು ನನಗೆ ಥಾಯ್ ಆಹಾರವನ್ನು ಮಾಡಿದ್ದಳು, ನಾನು ಅವಳಿಗೆ ಅಡುಗೆಮನೆಯಲ್ಲಿ ಸಹಾಯ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.