ರಂಜಾನ್: ಮಸೀದಿಗಳಲ್ಲಿ ನಮಾಜ್ಗೆ ಅವಕಾಶವಿಲ್ಲ: ಡಿವೈಎಸ್ ರಾಮರಾವ್
ಬಳ್ಳಾರಿ,ಏ.22: ಕೊರೋನಾ ವೈರಸ್ ಭೀತಿ ಹಿನ್ನಲೆ, ಈ ಬಾರಿ ರಂಜಾನ್ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ನಮಾಜ್ಗೆ ಅವಕಾಶವಿಲ್ಲ, ಅವರವರ ಮನೆಗಳಲ್ಲೇ ಹಬ್ಬ ಆಚರಣೆ ಮಾಡಿ, ಸರಕಾರ ಜಾರಿ ಮಾಡಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕೆಂದು ಬಳ್ಳಾರಿ ನಗರ ವಿಭಾಗದ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕೆ.ರಾಮಾರಾವ್ ಅವರು ಹೇಳಿದರು.
ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಸಂಬಂಧ ಮಂಗಳವಾರ ಬಳ್ಳಾರಿಯ ಸುಧಾಕ್ರಾಸ್ ಬಳಿಯ ಕೌಲ್ ಬಜಾರ್ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್ ಸದ್ಯ ಅಪಾಯಕಾರಿಯಾಗಿದೆ.
ಸದ್ಯ ಯಾವುದೇ ರೀತಿಯ ಬಹಿರಂಗ ಅಚರಣೆ, ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಈ ಸಂಬಂಧ ಸರಕಾರದಿಂದ ಬರೋ ಮಾರ್ಗಸೂಚಿಗಳನ್ನು ತಮ್ಮ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದರು.
ಬಳ್ಳಾರಿ ತಹಸೀಲ್ದಾರ್ ನಾಗರಾಜ್ ಮಾತನಾಡಿ, ಕೊರೋನಾ ವೈರಸ್ ಒಂದು ಸಾಂಕ್ರಾಮಿಕ ರೋಗ, ಅದು ಗಾಳಿಯಲ್ಲಿ ಹರಡುವ ರೋಗ ಹಾಗಾಗಿ, ರಂಜಾನ್ ಹಬ್ಬವನ್ನು ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳಬೇಕು.
ಯಾವುದೇ ಕಾರಣಕ್ಕೂ ಹೊರ ಬಾರದೇ, ಮಸೀದಿಗಳಲ್ಲಿ ಗುಂಪು ಗುಂಪಾಗಿ ಸೇರಿ ಹಬ್ಬ ಆಚರಣೆ ಮಾಡಲು, ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಈ ರೋಗವನ್ನು ಸಾಮಾಜಿಕ ಅಂತರ ಕಾಪಡಿಕೊಂಡೇ ಓಡಿಸಬೇಕೇ ಹೊರತು ಬೇರೆಯಾವುದು ಔಷಧಿ ಇಲ್ಲಾ. ತಮ್ಮ ಕುಟುಂಬದ ಉಳಿವಿಗಾಗಿ ಸರಕಾರದ ನಿಯಮ ಪಾಲನೆ ಮಾಡಿ, ಬಳ್ಳಾರಿ ಜಿಲ್ಲಾಡಳಿತಕ್ಕೆ ಸ್ಪಂದಿಸಿ ಎಂದು ಮನವಿ ಮಾಡಿದರು.
ಇನ್ನೂ ಮುಸ್ಲಿಂ ಸಮುದಾಯದ ಖಾಜಿಯೂ ಸಹ ಸರಕಾರದ ನಿಯಮ ಪಾಲನೆ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐಗಳಾದ ಗಾಯತ್ರಿ, ಸುಭಾಷ್, ನಾಗರಾಜ್, ಟ್ರಾಫಿಕ್ ಸಿಪಿಐ ನಾಗರಾಜ್ ಪಿಎಸ್ಐಗಳಾದ ರಘು ಕುಮಾರ್, ಶ್ರೀಶೈಲ, ಸೌಮ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 