ರಕ್ಷಾಬಂಧನ ಹಬ್ಬದಿಂದ ಮಾನವೀಯ ಸಂಬಂಧ ವೃದ್ಧಿ : ಶಿವಾನಿ ಅಕ್ಕನವರು
Raksha Bandhan festival enhances human relations: Shivani Akka
ಹಾರೂಗೇರಿ, 13 : ಪವಿತ್ರವಾದ ರಕ್ಷೆಯೇ ರಕ್ಷಾಬಂಧನ. ಕೆಟ್ಟ ಗುಣಗಳನ್ನು ಅರ್ಿಸಿ, ಒಳ್ಳೆಯ ಗುಣಗಳನ್ನು ಸಮರ್ಿಸಿಕೊಳ್ಳಬೇಕು. ಭಾವನಾತ್ಮಕ ಸಂಬಂಧಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ರಕ್ಷಾಬಂಧನ ಹಬ್ಬದಿಂದ ಮಾನವೀಯ ಸಂಬಂಧಗಳು ವೃದ್ಧಿಯಾಗಬೇಕಿದೆ ಎಂದು ಬ್ರಹ್ಮಕುಮಾರಿನಿ ಶಿವಾನಿ ಅಕ್ಕನವರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಪುರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಶಯ ತಿಳಿಸಿ ಅವರು ಮಾತನಾಡಿದರು.
ಒಳ್ಳೆಯ ಗುಣಗಳನ್ನು ಸಂಪಾದಿಸಿಕೊಳ್ಳುವುದೇ ಮನುಷ್ಯ ಧರ್ಮ. ರಕ್ಷಾಬಂಧನ ಪವಿತ್ರತೆಯ ಸಂಕೇತವಾಗಿದ್ದು, ಪವಿತ್ರತೆ ಮನದಲ್ಲಿ, ವಿಚಾರದಲ್ಲಿ, ನಾವು ಮಾಡುವಂತ ಪ್ರತಿ ಕರ್ಮದಲ್ಲೂ ಸುಕರ್ಮವಾಗಿರಬೇಕು. ಎಲ್ಲರೂ ದೇವನ ಮಕ್ಕಳು. ಶುದ್ಧ, ಪವಿತ್ರ, ಸ್ನೇಹಯುತವಾದ ಸಂಬಂಧವೇ ಸಹೋದರ-ಸಹೋದರಿಯತ್ವ. ಈ ದೃಷ್ಠಿ ಭಾವನೆ, ಸಂಬಂಧಗಳು ಕಡಿಮೆಯಾಗುತ್ತಿರುವುದರಿಂದ ಜಗತ್ತಿನಲ್ಲಿ ಅಶಾಂತಿ ಹೆಚ್ಚಾಗುತ್ತಿದೆ. ಮನುಷ್ಯ-ಮನುಷ್ಯನಿಗೆ, ದೇಹ-ದೇಹಕ್ಕೆ ಶತ್ರುವಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮಧ, ಮಾತ್ಸರ್ಯಗಳು ಪ್ರತಿಯೊಬ್ಬರ ಶತ್ರುಗಳು. ಪರಮಾತ್ಮ ಆತ್ಮ ರಕ್ಷಕನಾಗಿದ್ದು, ಆತ್ಮಗಳನ್ನು ಸರ್ವ ಬಂಧನದಿಂದ ರಕ್ಷಿಸುತ್ತಾನೆ.
ಕಂದಾಯ ಅಧಿಕಾರಿ ಭೀಮಶಿ ಅಂತರಗಟ್ಟಿ ಮಾತನಾಡಿ ಪರಸ್ಪರರಲ್ಲಿ ಸ್ನೇಹ, ಪ್ರೀತಿ, ಸಂಬಂಧ ಹಾಗೂ ಸಮಾಜದಲ್ಲಿ ಶಾಂತಿ, ಪ್ರೇಮತ್ವ ನೆಲೆಗೊಳ್ಳಲು ಶ್ರಮಿಸುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯ ಪ್ರಶಂಸನೀಯವಾದುದು. ಅವರ ಅತ್ಯುನ್ನತ ವಿಚಾರ ಧಾರೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಸಮುದಾಯ ಸಂಘಟನಾಧಿಕಾರಿ ಪಿ.ವಿ.ಹವಳೇವ್ವಗೋಳ, ಶಂಕರ ಪಾಗೆ, ಸುನಂದಾ ಠಕ್ಕಣ್ಣವರ, ಸಂಜೀವ ಗಸ್ತಿ, ಗಂಗಯ್ಯ ಮಠಪತಿ, ಬಸವರಾಜ ಬಡಿಗೇರ, ಶಂಕರ ಕಮತಗಿ, ಶರಣಪ್ಪ ಬಡಿಗೇರ, ಮಾರುತಿ ಸರಿಕರ, ರಾಜಶೇಖರ ಕಳಸ್ಕರ, ಸಿದ್ದು ಉಳ್ಳಾಗಡ್ಡಿ, ಮುಬಾರಕ ಜಮಾದಾರ, ಲೋಕೇಶ ಕಡಪಟ್ಟಿ, ಶ್ರಾವಣ ಖನದಾಳ, ಶಾಂತಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 