ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ
Raksha Bandhan Celebration at Indian Public School
ಇಂಡಿ 30: ಶಾಸ್ತ್ರೀ ನಗರದಲ್ಲಿ ಇರುವ (ವಿಜಯಪುರದಲ್ಲಿ) ರಕ್ಷಾಬಂಧನ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಭೀ.ಗುಡ್ಡದ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ರಕ್ಷಾಬಂಧನ ಹಬ್ಬದ ವಿಶೇಷತೆಯನ್ನು ವಿವರಿಸಿದರು.
"ರಕ್ಷಾ" ಎಂಬ ಪರಿಕಲ್ಪನೆ ಬಹಳ ಪುರಾತನವಾದದ್ದು ಭಾರತೀಯ ಸಂಸ್ಕೃತಿಯಲ್ಲಿ ರಕ್ಷಣೆಯ ಸಂಕೇತವಾಗಿ ಪವಿತ್ರದಾರವನ್ನು ಕಟ್ಟುವ ಪದ್ಧತಿ ಬಹಳ ಹಿಂದಿನಿಂದಲೂ ಇತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೈಗೆ ಪವಿತ್ರದಾರ ಕಟ್ಟುವ ಸಂಪ್ರದಾಯ ಕಂಡುಬರುತ್ತದೆ. ವೇದಕಾಲದಲ್ಲಿ ಯಜ್ಞ ಅಥವಾ ಧಾರ್ಮಿಕ ವಿಧಿಗಳ ಸಂದರ್ಭಗಳಲ್ಲಿ ವ್ಯಕ್ತಿಯ ಕ್ಷೇಮ ಹಾಗೂ ರಕ್ಷಣೆಗಾಗಿ ಮಂತ್ರಪೂರ್ವಕವಾಗಿ ದಾರವನ್ನು ಕಟ್ಟುವ ಪದ್ಧತಿ ಇತ್ತು,
ಕಾಲಕ್ರಮೇಣ ಪವಿತ್ರ ರಕ್ಷಣಾ ದಾರದ ಸಂಪ್ರದಾಯವು ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ಹೆಚ್ಚು ಬೆಸೆದುಕೊಂಡಿತು ವಿಶೇಷವಾಗಿ ಸಹೋದರಿ ಸಹೋದರ ಸಂಬಂಧದಲ್ಲಿ ರಾಖಿ ಕಟ್ಟುವ ಆಚರಣೆ ಹೆಚ್ಚು ಪ್ರಸಿದ್ಧವಾಯಿತು. ಸಹೋದರಿ ರಾಖಿ ಕಟ್ಟುವುದು ಮತ್ತು ಅವಳ ಕ್ಷೇಮಕ್ಕಾಗಿ ನಿಲ್ಲುವ ಸಂಕಲ್ಪ ಮಾಡುವುದು ಇವು ನಿಧಾನವಾಗಿ ಹಬ್ಬದ ಪ್ರಮುಖ ಭಾಗಗಳಾದವು.ಯುವ ಮುಖಂಡರಾದ ರಾಘವೇಂದ್ರ ಕೋಟಿಖಾನೆ,
ಅರುಣ ಅಂಗಡಿ ಹಾಗೂ ಶಾಲೆಯ ಆಡಳಿತ ಸಂಯೋಜಕರಾದ ಚೈತ್ರಾ ಹತ್ತಿ ್ಘ ಶೈಕ್ಷಣಿಕ ಸಂಯೋಜಕರಾದ ಆರಿಫಾ ಬಿಜಾಪುರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 