ಕಂಪ್ಲಿಯಲ್ಲಿ ಮೇಲೆ ಮಳೆ, ಕೆಳಗೆ ಹೊಳೆ: ಜನಜೀವನ ಅಸ್ತವ್ಯಸ್ತ
Rain: People's lives in chaos
ಕಂಪ್ಲಿ 09: ಕಳೆದ ಹಲವಾರು ದಿನಗಳಿಂದ ಕಣ್ಮರೆಯಾಗಿ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದು, ಹಲವು ದಿನಗಳ ಕಾಲ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿತ್ತು ಆದರೆ ಎರಡು ದಿನಗಳಿಂದ ಮೇಲೆ ಮಳೆ ಕೆಳಗೆ ಹೊಳೆ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಬಿರುಸಾಗಿ ಸುರಿದ ಮಳೆ ನಂತರ ಜಿಟಿ,ಜಿಟಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ಮಧ್ಯಾಹ್ನದಲ್ಲಿ ರಭಸವಾಗಿ ಸುರಿಯಲು ಆರಂಭಿಸಿದ ಮಳೆ ಕೆಲವು ಕಾಲ ರಭಸವಾಗಿ ಸುರಿಯಿತು.ನಂತರ ಜಿಟಿ, ಜಿಟಿ ಮಳೆಯಾಗಲಾರಂಭಿಸಿತು. ಇದರಿಂದ ವಿದ್ಯುತ್ ಕಡಿತವಾಗಿತ್ತು. ಜೊತೆಗೆ ಸಂಜೆಯೇ ಮಳೆ ಸುರಿಯಲಾರಂಭಿಸಿದ್ದರಿಂದ ಶಾಲೆ ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಸುರಿಯುವ ಮಳೆಯಲ್ಲಿಯೇ ಮನೆಯನ್ನು ಸೇರುವಂತಾಗಿತ್ತು.
ಇನ್ನು ಕಂಪ್ಲಿ ಭಾಗದಲ್ಲಿ ಹಲವು ದಿನಗಳ ಕಾಲ ಮಳೆ ಕಣ್ಮರೆಯಾಗಿದ್ದರೆ, ಈ ಬಾಗದ ಜೀವನನಾಡಿ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕಳೆದ ಜಲಾಶಯದ 19ನೇ ಕ್ರೆಸ್ಟ್‌ಗೇಟ್ ತುಂಡಾಗಿ ಹೋಗಿದ್ದರಿಂದ ಹಾಗೂ ತಾತ್ಕಾಲಿಕ ಕ್ರೆಸ್ಟ್‌ಗೇಟ್‌ನ್ನು ಕೂಡಿಸಿರುವುದರಿಂದ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಂದರೆ 105.ಟಿಎಂಸಿಯಷ್ಟು ನೀರನ್ನು ಸಂಗ್ರಹಿಸದೇ ಕೇವಲ 80 ಟಿಎಂಸಿ ನೀರನ್ನು ಸಂಗ್ರಹಿಸಲು ತೀರ್ಮಾನ ಮಾಡಿರುವುದರಿಂದ ಜಲಾಶಯದಲ್ಲಿ ಈಗಾಗಲೇ ಸುಮಾರು 76 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ಮತ್ತು ಜಲಾಶಯಕ್ಕೆ ನೀರಿನ ಒಳ ಅರಿವಿನ ಪ್ರಮಾಣ ಅಧಿಕವಾಗಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕಂಪ್ಲಿ ಕೋಟೆಯಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಮುಳುಗುವ ಹಂತವನ್ನು ತಲುಪಿದ್ದು, ಕಳೆದ 5 ದಿನಗಳಿಂದ ನದಿ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ಜಮೀನುಗಳ ಜಲಾವೃತಗೊಂಡಿವೆ.
ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕೇವಲ ಹೊಳೆ ಮಾತ್ರ ತುಂಬಿ ಹರಿಯುತ್ತಿದ್ದರಿಂದ ತೊಂದರೆಯಿರಲಿಲ್ಲ, ಆದರೆ ಈಗ ಮೇಲೆ ಮಳೆ ಕೆಳಗೆ ಹೊಳೆ ಎನ್ನುವಂತಾಗಿದೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 