ಪುತಳಾ ಮೋಟೆ ರಾಜ್ಯಕ್ಕೆ 9ನೇ ರಾ​‍್ಯಂಕ್

ರಾಮದುರ್ಗ 23: ತಾಲೂಕಿನ ಸುರೇಬಾನದ ಶ್ರೀಫಲಹಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪುತಳಾ ಸಿದ್ಧು ಮೋಟೆ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರಾ​‍್ಯಂಕ್ ಪಡೆದುಕೊಂಡಿದ್ದಾಳೆ. 

ಜಾನಪದ ಕಲಾವಿದ ಸಿದ್ಧು ಮೋಟೆ ಅವರ ಮಗಳಾದ ಪುತಳಾ ಮೋಟೆ ಯಾವುದೇ ಟ್ಯೂಷನ್ ಇಲ್ಲದೇ ಕನ್ನಡ, ಶಿಕ್ಷಣಶಾಸ್ತ್ರ ಮತ್ತು ಭೂಗೋಳಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳು. ಹಾಗೂ ರಾಜ್ಯಶಾಸ್ತ್ರಕ್ಕೆ  97, ಇತಿಹಾಸ 94 ಮತ್ತು ಇಂಗ್ಲಿಷ್ 93 ಅಂಕಗಳೊಂದಿಗೆ 584 ಶೇ.97.33  ಅಂಕ ಪಡಿದುಕೊಂಡಿದ್ದಾಳೆ. 

ಕಲಾ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರಾ​‍್ಯಂಕ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ. ಭೋಧಕರ ಹಾಗೂ ತಂದೆ ತಾಯಿಯ ಮಾರ್ಗದರ್ಶನದಲ್ಲಿ ಮಾಡಿದ ಸಾಧನೆಗೆ ಮೆಚ್ಚಿ ಶಿಕ್ಷಣಶಾಸ್ತ್ರ ಉಪನ್ಯಾಸಕ ಪ್ರೊ. ಪಿ.ಎಲ್‌. ಮಿಸಾಳೆ ಹಾಗೂ ಭೂಗೋಳಶಾಸ್ತ್ರ ಉಪನ್ಯಾಸಕ ಪ್ರೊ. ಮಹಮ್ಮದ ಯಾದವಾಡ, ಸಂಗಮೇಶ ಪೂಜಾರ ಅವರು ಸನ್ಮಾನಿಸಿ ಗೌರವಿಸಿದ್ದಾರೆ.