ಶಾಂತಿ ಕದಡಿದರೆ ತಕ್ಕ ಶಾಸ್ತಿ: ಸಿಪಿಐ ಈರಯ್ಯ ಮಠಪತಿ

ಯರಗಟ್ಟಿ 22: ಗಣೇಶ ಚತುರ್ಥಿ ಹಾಗೂ ಈದ್ ಮೀಲಾದ್ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ವೃತ್ತ (ಸಿಪಿಐ) ನೀರೀಕ್ಷಕ ಈರಯ್ಯ ಮಠಪತಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. 

ಪೊಲೀಸ್ ಕಚೇರಿಯಿಂದ ಆರಂಭವಾದ ಪಥ ಸಂಚಲನ ಸಂಗೋಳ್ಳಿ ರಾಯಣ್ಣ ಸರ್ಕಲ್, ಪೇಟೆ ಮಾರ್ಗ, ಭಜಂತ್ರಿ, ಒಂಟಿ ಗಲ್ಲಿ, ಮಹಾಂತೇಶ ನಗರ, ಕರಿಗೋಣ್ಣವರ ಓಣಿ, ಅಗಸಿ ಓಣಿ, ಟೀಲಕ್ ಚೌಕ್, ಬಸ್ ನಿಲ್ದಾಣ ಮೂಲಕ ಗಾಂಧಿ ಸರ್ಕಲ್ ತಲುಪಿ ಮುಕ್ತಾಯಗೊಂಡಿತು. 

ಸಿಪಿಐ ಈರಯ್ಯ ಮಠಪತಿ ಮಾತನಾಡಿ, ಪಟ್ಟಣದಲ್ಲಿ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು.  

ಈ ಕಾರಣದಿಂದ ಮುನ್ನಚ್ಚರಿಕೆಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಪಥ ಸಂಚಲನ ನಡೆಸಲಾಗಿದೆ. ಗಣೇಶ ಮೂರ್ತಿ ವಿಸರ್ಜಿಸುವ ವೇಳೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಶಾಂತಿ ಕದಡುವ ಕೆಲಸವನ್ನು ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಸಿದರು. 

ಪಿಎಸ್‌ಐಗಳಾದ ಆಯ್‌. ಎಂ. ಹಿರೇಗೌಡರ,  ಎಸ್‌. ಎಂ. ಕಾರಜೋಳ, ಎಎಸ್‌ಐ ಡಬೂ.್ಲ ಎಚ್‌. ಯಾದವಾಡ, ವಾಯ್‌. ಎಂ. ಕಡಕೋಳ, ಎಂ. ಬಿ. ಸಣ್ಣನಾಯ್ಕ, ಎಚ್‌. ಆರ್‌. ನ್ಯಾಮಗೌಡರ,, ಸೇರಿದಂತೆ ಜಿಲ್ಲಾ ಮೀಸಲು ಪಡೆ ತುಕಡಿ, ಗೃಹ ರಕ್ಷಕ ದಳ ಸಿಬ್ಬಂದಿ, ಸಿವಿಲ್ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.