ಸೆ.5 ರಂದು ಪ್ರಜಾಸೇವೆ ಆಂದೋಲನಕ್ಕೆ ಚಾಲನೆ : ಜೂಗಲ್ ಮಂಜುನಾಯಕ

ಸೆ.5 ರಂದು ಪ್ರಜಾಸೇವೆ ಆಂದೋಲನಕ್ಕೆ ಚಾಲನೆ : ಜೂಗಲ್ ಮಂಜುನಾಯಕ Public service movement launched on September 5: Jugal Manjunayak

ಲೋಕದರ್ಶನ ವರದಿ 

ಕಂಪ್ಲಿ 03 : ಸರ್ಕಾರದ ಮಹಾತ್ವಾಂಕ್ಷಿ ಯೋಜನೆಗಳಲ್ಲೊಂದಾದ ಪ್ರಜಾಸೇವೆ ಆಂದೋಲನಾದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಪಾಲ್ಗೊಳ್ಳುವಂತೆ ತಹಸಿಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು. ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏರಿ​‍್ಡಸಿದ್ದ  ಪ್ರಜಾಸೇವೆ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸೆ.5 ರಂದು ಬೆಳಿಗ್ಗೆ 10 ಗಂಟೆಗೆ ಮಾರುತಿ ನಗರದ ಪುರಸಭೆಯ ಸಮುದಾಯ ಭವನದಲ್ಲಿ ಶಾಸಕ ಜೆ.ಎನ್‌.ಗಣೇಶ್ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನಾ ಕಾರ್ಯಕ್ರಮ ಏರಿ​‍್ಡಸಿದ್ದು, ಸಾರ್ವಜನಕರ ಕುಂದು- ಕೊರತೆಗಳಿಗೆ  ಸೂಕ್ತವಾಗಿ ಸ್ಪಂದಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಿದ ಅವರು  ನಂತರ ಆಂದೋಲನ ಸಿದ್ಧತೆ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ತಾ.ಪಂ. ಆರ್‌.ಕೆ.ಶ್ರೀಕುಮಾರ್, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಎ.ಶ್ರೀನಿವಾಸ್, ಜೆ.ಪ್ರದೀಪ್, ಆನಂದ್ ಪೆಮ್ಮಾರ್, ಎಸ್‌.ಚೇತನ್ ಕುಮಾರ್ ನಾಯಕ, ಬಿ.ವಿರೂಪಾಕ್ಷಗೌಡ, ಎಸ್‌.ಬಿ.ಶ್ರೀನಿವಾಸ, ಬಿ.ವಿ.ಅನುಪಮ, ಗಾದಿಲಿಂಗಪ್ಪ, ವೀರೇಶ್  ಎಚ್‌.ಮಾಶೆಟ್ಟಿ, ಟಿ.ಎಂ.ಬಸವರಾಜ,ಭೀಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.