ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಿ: ನಗರಸಭೆ ಅಧ್ಯಕ್ಷೆ ಸುಂಕಮ್ಮ


ಹೊಸಪೇಟೆ (ವಿಜಯನಗರ) 07: ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರಸಭೆಯ ವಿಶೇಷ ಸಭೆಯು ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತರೆಯಲ್ಲಿ ಸಭಾಭವನದಲ್ಲಿ ಸೋಮವಾರ ಜರುಗಿತು. 

ಸಭೆಯಲ್ಲಿ ಒಳಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಪೈಪ್‌ಲೈನ್ ಕಾಮಗಾರಿ, ಸ್ವಚ್ಛತೆ ಹಾಗೂ ಪೌರಕಾರ್ಮಿಕರ ಸಮಸ್ಯೆಗಳನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಪ್ರಸ್ತಾಪಿಸಿದರು. 

ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಅಧ್ಯಕ್ಷೆ ಸುಂಕಮ್ಮ ಅವರು ತಾವು ಹೇಳಿರುವ ಸಮಸ್ಯೆಗಳಲ್ಲ ಗಮನಕ್ಕೆ ಬಂದಿದ್ದು, ಪ್ರತಿಯೊಂದು ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಸ್ವಂದಿಸಿ ಆದಷ್ಟು ಬೇಗನೆ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಆದಷ್ಟು ಅತೀ ಶೀಘ್ರದಲ್ಲಿ ಎಲ್ಲಾ ವಾರ್ಡ್‌ಗಳನ್ನು ಪರೀಶೀಲಿಸಿ ಮತ್ತು ಅಧಿಕಾರಿಗಳೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ತಾಳ್ಮೆ ಮತ್ತು ಸಹಕಾರದಿಂದ ಎಲ್ಲರು ಕಾರ್ಯನಿರ್ವಹಿಸೋಣ ಎಂದರು. 

ಸಭೆಯಲ್ಲಿ ವಿವಿಧ ಪ್ರಮುಖ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು.  ಸದಸ್ಯರುಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿ ತಮ್ಮ ಸಮಸ್ಯೆಗಳನ್ನು ಅದಷ್ಟು ಬೇಗನೆ ಬಗೆಪರಿಹರಿಸಲು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರರಾದ ಎಸ್‌.ಎಲ್‌.ಆನಂದ್, ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು, ನಗರಸಭೆಯ ಪೌರಯುಕ್ತರ  ಮನ್ಸೂರ್ ಅಲಿ ಹಾಗೂ ನಗರಸಭೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಹಾಜರಿದ್ದರು.