ಸಕಿಪ್ರಾ ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸಿ

ಕಂಪ್ಲಿ 12: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆಯಲ್ಲಿ ಸೋಮವಾರ ಗ್ರಾಪಂ ಅಧ್ಯಕ್ಷೆ ಎಚ್‌.ಹೊನ್ನೂರಮ್ಮ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಜರುಗಿತು. 

ಗ್ರಾಮಸಭೆಯಲ್ಲಿ ಮಕ್ಕಳು ಮೆಟ್ರಿ ಸಹಿಪ್ರಾ ಶಾಲೆಗೆ ಪ್ರಾಯೋಗಾಲಯಕ್ಕೆ ಗಣಿತ ಮತ್ತು ವಿಜ್ಞಾನದ ಪರಿಕರಗಳನ್ನು ಒದಗಿಸುವಂತೆ, ಮೆಟ್ರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ಶಿಕ್ಷಕರನ್ನು ನೇಮಿಸುವಂತೆ, ಶಿವಪುರ ಸಕಿಪ್ರಾ ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ, ಉಪ್ಪಾರಹಳ್ಳಿ ಸಹಿಪ್ರಾ ಶಾಲೆ ಮಕ್ಕಳ ಆಟೋಟಕ್ಕೆ ಆಟದ ಮೈದಾನ ಒದಗಿಸುವಂತೆ, ಉಪ್ಪಾರಹಳ್ಳಿಯಿಂದ ಮೆಟ್ರಿ ಶಾಲೆಗೆ ಬರಲು ಸಕಾಲದಲ್ಲಿ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಹೆಚ್‌.ಸಿ.ರಾಘವೇಂದ್ರ, ಪಿಡಿಒ ಶ್ರೀಶೈಲಗೌಡ, ಕಾರ್ಯದರ್ಶಿ ಎಚ್‌.ಹುಲುಗಪ್ಪ, ಗ್ರಾಪಂ ಸದಸ್ಯರಾದ ಎಚ್‌.ಕುಮಾರಸ್ವಾಮಿ, ವಿಜಯಲಕ್ಷ್ಮಿ, ತಿಮ್ಮಪ್ಪ, ಗೀರೀಶ್, ಗುಂಡಮ್ಮ, ಅಂಜನಾಪುರ ವೀರಣ್ಣ, ಸಿ.ಬಸವರಾಜ, ರಾಮನಗೌಡ, ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ಜಗದೀಶ್  ಮತ್ತು ಸದಸ್ಯರು ಸೇರಿ ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳಿದ್ದರು.