ಶಳ್ಳಗಿ ಕೂಲಿ ಕಾರ್ಮಿಕರಿಗೆ ಜಾಬ್ಕಾರ್ಡ್‌ ವಿತರಿಸದಿರುವುದಕ್ಕೆ ಪ್ರತಿಭಟನೆ

ಶಳ್ಳಗಿ ಕೂಲಿ ಕಾರ್ಮಿಕರಿಗೆ ಜಾಬ್ಕಾರ್ಡ್‌ ವಿತರಿಸದಿರುವುದಕ್ಕೆ ಪ್ರತಿಭಟನೆ  Protest over non-issuance of job cards to wage laborers in Shallagi


ತಾಳಿಕೋಟಿ ಸೆ.11: ತಾಲ್ಲೂಕಿನ ಬಂಟನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಳಗಿ ಗ್ರಾಮದ ಅರ್ಹ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂ.ಜಿ.ಎನ್‌ಆರಿ​‍್ಜಎ) ಜಾಬ್ಕಾರ್ಡ್‌ ವಿತರಿಸಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಗುರುವಾರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.  

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ರಮೇಶ ಸಾಸಬಾಳ ಮಾತನಾಡಿ, ಬಂಟನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಳಗಿ ಗ್ರಾಮದ ಕೂಲಿ ಕಾರ್ಮಿಕರು ಜಾಬ್ಕಾರ್ಡ್‌ ಪಡೆಯಲು ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರೂ ಅವರಿಗೆ ಜಾಬ್ಕಾರ್ಡ್‌ ವಿತರಿಸಿಲ್ಲ. ಅಲ್ಲದೆ ಉದ್ಯೋಗವನ್ನೂ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.  ಈ ಕುರಿತು ಮಾಹಿತಿ ಕೇಳಲು ಕಚೇರಿಗೆ ಬಂದ ಕೂಲಿ ಕಾರ್ಮಿಕ ಮಹಿಳೆಯೊಂದಿಗೆ ಸಿಬ್ಬಂದಿ ಸರಿಯಾಗಿ ವರ್ತಿಸಿಲ್ಲ. ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಅವರು ತಿಳಿಸಿದರು.