ಕಾವೇರಿ ತಾಂತ್ರಿಕ ಸಮಸ್ಯೆಗಳಿಂದ ಬೆಳಗಾವಿಯಲ್ಲಿ ಆಸ್ತಿ ನೋಂದಣಿ ಕಗ್ಗಂಟು: ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಕ್ರೆಡೈ ಮನವಿ
Property registration chaos in Belgaum due to Cauvery technical issues: CREDAI appeals to Chief Mini
ಬೆಳಗಾವಿ 14: ಇ-ಖಾತಾ ಮತ್ತು ಕಾವೇರಿ-2 ತಂತ್ರಾಂಶದಲ್ಲಿ ಇತ್ತೀಚೆಗೆ ಮಾಡಲಾಗಿರುವ ಬದಲಾವಣೆಗಳಿಂದ ಬೆಳಗಾವಿಯ ಹಲವು ಪ್ರದೇಶಗಳ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ಮಧ್ಯಪ್ರವೇಶ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಳಗಾವಿ ಕ್ರೆಡೈ ಮನವಿ ಸಲ್ಲಿಸಿದೆ. ಕ್ರೆಡೈ ಬೆಳಗಾವಿ ಅಧ್ಯಕ್ಷ ಯುವರಾಜ ಹುಲಜಿ ಹಾಗೂ ಕಾರ್ಯದರ್ಶಿ ಪ್ರಶಾಂತ ವಾಂಡ್ಕರ್ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಇ-ಖಾತಾ ಮತ್ತು ಕಾವೇರಿ-2 ವ್ಯವಸ್ಥೆಯ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಮಸ್ಯೆಗಳಿಂದ ಟಿಳಕವಾಡಿ, ಸಂಕೇಶ್ವರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ ಎಂದು ತಿಳಿಸಲಾಗಿದೆ. ಇದರ ಪರಿಣಾಮವಾಗಿ ನಾಗರಿಕರು, ಬಿಲ್ಡರ್‌ಗಳು, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದು ಆರೋಪಿಸಲಾಗಿದೆ.
ನಿರಂತರ ಪಟ್ಟಾ ಆಸ್ತಿಗಳಲ್ಲಿ ಗೊಂದಲ ಟಿಳಕವಾಡಿ, ನೆಹರು ನಗರ, ಮುಜಾವರ್ ಗಲ್ಲಿ, ಫೋರ್ಟ್ ರಸ್ತೆ, ಸ್ಟೇಷನ್ ರಸ್ತೆ, ಪಾಟೀಲ ಗಲ್ಲಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿನ ನಿರಂತರ ಪಟ್ಟಾ ಆಸ್ತಿಗಳಲ್ಲಿ ಗಂಭೀರ ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 70 ರಿಂದ 100 ವರ್ಷಗಳ ಹಿಂದೆ ನೀಡಲಾದ ಈ ಆಸ್ತಿಗಳಲ್ಲಿ ಮೂಲ ಭೂಮಾಲೀಕರ ಹೆಸರುಗಳು ಸಿಟಿಎಸ್ ದಾಖಲೆಗಳಲ್ಲಿ ಇನ್ನೂ ಉಳಿದಿದ್ದು, ಕಾವೇರಿ-2 ಮತ್ತು ಇ-ಖಾತಾ ಸಂಯೋಜನೆಯ ನಂತರವೂ ಮೂಲ ಮಾಲೀಕರನ್ನೇ ಮಾಲೀಕರಾಗಿ ತೋರಿಸಲಾಗುತ್ತಿದೆ.
ಹಾಲಿ ಹಕ್ಕುದಾರರನ್ನು ಕೇವಲ ತೆರಿಗೆದಾರರಾಗಿ ಮಾತ್ರ ದಾಖಲಿಸಲಾಗುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಮಾಲೀಕತ್ವ ದೃಢೀಕರಣಕ್ಕಾಗಿ ಮೂಲ ಮಾಲೀಕರು ಅಥವಾ ಅವರ ವಾರಸುದಾರರ ಸಮ್ಮತಿ ಕಡ್ಡಾಯವಾಗಿದ್ದು, ಅನೇಕ ಪ್ರಕರಣಗಳಲ್ಲಿ ವಾರಸುದಾರರನ್ನು ಪತ್ತೆಹಚ್ಚುವುದು ಅಸಾಧ್ಯವಾಗಿರುವುದರಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಾರಸುದಾರರಿಂದ ಅನಗತ್ಯ ಬೇಡಿಕೆಗಳ ಆರೋಪ ಕೆಲವು ಪ್ರಕರಣಗಳಲ್ಲಿ ವಾರಸುದಾರರೆಂದು ಹೇಳಿಕೊಳ್ಳುವವರು ಅನಗತ್ಯ ಹಣದ ಬೇಡಿಕೆ ಇಡುತ್ತಿರುವುದರಿಂದ ನೈಜ ವ್ಯವಹಾರಗಳು ಸ್ಥಗಿತಗೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 