ಮಾನವೀಯ ಸಂಬಂಧಗಳ ಬೆಳವಣಿಗೆಯಲ್ಲಿ ಮಕ್ಕಳನ್ನು ಬೆಳಸಿ

ಲೋಕದರ್ಶನವರದಿ

ಶಿಗ್ಗಾವಿ : ಇಂದಿನ ಆಧುನಿಕ ಸಂಸ್ಕೃತಿಯ ಮುಂದೆ ಮಾನವೀಯ ಮೌಲ್ಯಗಳ ಗುಣ ಮತ್ತು ಕುಟುಂಬದ ಜೊತೆ ಬೆರೆಯುವ ಗುಣ ಬೆಳೆಸುವ ಮಾನವೀಯ ಸಂಬಂಧಗಳ ಬೆಳವಣಿಗೆಯಲ್ಲಿ ಮಕ್ಕಳು ಬೆಳೆಯಬೇಕು ಅಂದಾಗ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿದು ಸಂಸ್ಕಾರವಂತ ಮಕ್ಕಳಾಗಲು ಸಾಧ್ಯವಿದೆ ಎಂದು ಶಿಗ್ಗಾವಿ ಪೋಲೀಸ್ ಠಾಣೆಯ ಪಿಎಸ್ಐ ಶಿವರುದ್ರಪ್ಪ ಮೇಟಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಜೆಎಂಜೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಾಷರ್ಿಕ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಏಂಜೇಲ್ಸ್ ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂದೆ-ತಾಯಿಯ ಪ್ರೀತಿ ಶ್ರೇಷ್ಠವಾದದ್ದು ಅಂತಹ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ, ಮಕ್ಕಳು ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು ಅಂತಹ ಮಕ್ಕಳು ಭಾರತದ ಉತ್ತಮ ಪ್ರಜೆಯಾಗಲು ಸಾಧ್ಯವಿದೆ.

 ಮಕ್ಕಳ ನಿಷ್ಕಾಳಜಿ ಮನೋಭಾವ ಅವರನ್ನು ಅಪರಾಧಿಗಳನ್ನಾಗಿ ಮಾಡುತ್ತದೆ ಯಾವುದೇ ವಿಷಯದಲ್ಲಿ ತಕರ್ಿಸುವ ಗುಣ ಬೆಳೆದು ಉತ್ತಮ ಜೀವನಕ್ಕೆ ಅಡಿಪಾಯಹಾಕಿಕೊಳ್ಳುವಂತಿರಬೇಕು ಎಂದು ಕಿವಿ ಮಾತು ಹೇಳಿದರು.

ಶಿಗ್ಗಾವಿ ಟ್ರೀನಿಟಿ ಚಚರ್್ನ ಅರುಣ್ ಫನರ್ಾಂಡಿಸ್ ಮಾತನಾಡಿ, ತಪ್ಪುಗಳನ್ನು ಮನ್ನಿಸುವ ಮಹೋನ್ನತ ಗುಣವನ್ನು ಆ ಏಸು ಹೊಂದಿದ್ದಾರೆ, ಮಕ್ಕಳ ತಪ್ಪುಗಳನ್ನು ಮನ್ನಿಸಿ ಪ್ರೋತ್ಸಾಹಿಸುವುದಕ್ಕಾಗಿಯೇ ಆ ಏಸು ದೇವರು ಕ್ರೀಸ್ಮಸ್ ಡೆ ಮನೆಗೆ ಬರುತ್ತಾರೆ ಜೊತೆಗೆ ನೆನಪಿನ ಉಡುಗೊರೆ ನೀಡುತ್ತಾರೆ ಆದ್ದರಿಂದ ಮಕ್ಕಳು ಸದಾ ಕ್ಷಮಾಗುಣ ಉಳ್ಳವರಾಗಬೇಕು, ಒಳ್ಳೆಯ ಸಂದೇಶಗಳನ್ನು ಸ್ವೀಕರಿಸುವಂತವರಾಗಬೇಕು.

  ಕೆಟ್ಟ ವಿಚಾರಗಳನ್ನು ಬಿಟ್ಟು ಬಿಡಿ ಒಳ್ಳೆಯ ಚಿಂತನೆಗಳ ಕಡೆ ಗಮನಕೊಡಿ ಜೀವನ ಅರ್ಥಪೂರ್ಣವಾಗಿರುತ್ತದೆ ಮಕ್ಕಳು ಇದ್ದನ್ನು ಮೈಗೂಡಿಸಿಕೊಂಡು ಒಳ್ಳೆಯ ಜ್ಞಾನಿಗಳಾಗಿ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ತಾಲೂಕಿನ ಹಾಗೂ ಕಾಲೇಜಿನ ಕೀತರ್ಿ ಬೆಳಗಿಸಿ ಜೆಎಂಜೆ ಕಾಲೇಜಿನ  ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು, ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಶಾಲೆಯ ಮೇಲ್ವಿಚಾರಕಿಯರಾದ ಸಿಸ್ಟರ್ ಫಿಲೋಮಿನಾ ಜೋಸೆಫ್ ಹಾಗೂ ಪ್ರಾಚಾರ್ಯರಾದ ಸಿಸ್ಟರ್ ರೋಜರಾಣಿ ಮಾತನಾಡಿದರು.

ಪೋಸ್ಕೋ ಕಮೀಟಿ ಸದಸ್ಯಣಿಯರಾದ ಸೋಮವ್ವ ಹುಬ್ಬಳ್ಳಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.